ಕೈಕಂಬ: ಈ ಜಗತ್ತಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರಿಗೆ ಸಾಕಷ್ಟು ದೇಶಗಳಿದ್ದರೂ ಹಿಂದೂಗಳಿಗೆ ಒಂದೇ ಒಂದು ದೇಶವಿಲ್ಲ. ಭಾರತದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿರುವುದರಿಂದ ನಮ್ಮ ದೇಶ ಹಿಂದೂ ರಾಷ್ಟ್ರವಾಗಬೇಕು. ಆದರೆ ಈ ಸಿದ್ಧಾಂತದ ವಿರುದ್ಧ ಸಾಕಷ್ಟು ವಿರೋಧಗಳು ಸೃಷ್ಟಿಯಾಗುತ್ತಿರುವುದು ನಿಜಕ್ಕೂ ಖೇದಕರ. ಹಿಂದೂ ರಾಷ್ಟ್ರ ಸ್ಥಾಪಿಸುವ ಉದ್ದೇಶದಿಂದ ಸಂಘಟನೆಯೊಂದು ಮಂಗಳೂರಿನಲ್ಲಿ ಅಳವಡಿಸಿದ್ದ ಬ್ಯಾನರ ಬಗ್ಗೆ ವಿರೋಗಳಿಂದ ವಿರೋಧ ವ್ಯಕ್ತವಾದ ಕಾರಣ ಅದನ್ನು ಪೆÇಲೀಸರು ಬಲವಂತವಾಗಿ ತೆಗೆದಿದ್ದಾರೆ.
ಅವರು ನಡೆಸುವ ಕಾರ್ಯಕ್ರಮಕ್ಕೆ ಇತರರು ಅಡ್ಡಿ ವ್ಯಕ್ತಪಡಿಸಿದ ಪರಿಣಾಮ ಮೂರು ಕಡೆಯಿಂದ ಸ್ಥಳಾಂತರಗೊಂಡರೂ ಸಹ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ನುಡಿದರು ಎಂದು ಮೂಡಬಿದಿರೆ ಕರಿಂಜೆ ಮಠದ ಶ್ರೀಮುಕ್ತಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಅವರು ಹಿಂದೂ ಸೇವಾ ಸಮಿತಿ ಬಾರ್ದಿಲ- ಕಲ್ಲಾಡಿ ಇದರ ದಶಮಾನೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ದಿಕ್ಸೂಚಿ ಭಾಷಣ ಮಾಡಿದ ದುರ್ಗಾವಾಹಿನಿಯ ವಿಭಾಗ ಸಂಯೋಜಕಿ ವಿದ್ಯಾಮಲ್ಯ ಮಾತಾಡಿ, ಶಬರಿಮಲೆಯ ವಿಚಾರದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಅಲ್ಲಾಡಿಸುವ ವ್ಯವಸ್ಥಿತ ಷಡ್ಯಂತ್ರವೊಂದು ನಡೆಯುತ್ತಿದೆ. ಈ ಮುಂಚೆ ಶಬರಿಮಲೆಗೆ ಅನ್ಯರ ದಾಳಿ ನಡೆದಿದ್ದು, ಮತಾಂತರದ ಷಡ್ಯಂತ್ರ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಮಹಿಳೆಯರ ಪ್ರವೇಶದ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ನಿಜವಾಗಿ ನೋಡಿದರೆ ಶಬರಿಮಲೆಗೆ ಹತ್ತರಿಂದ ಐವತ್ತು ವಯಸ್ಸಿನ ಮಹಿಳೆಯರನ್ನು ಹೊರತುಪಡಿಸಿ ಉಳಿದ ಎಲ್ಲ ಮಹಿಳೆಯರಿಗೆ ಪ್ರವೇಶವಿದೆ. ಆದ್ದರಿಂದ ಈ ಬಗ್ಗೆ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ನುಡಿದರು.
ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತಾಡಿ, ಯೋಧರು ಗಡಿರಕ್ಷಣೆ ಮಾಡುವ ಮೂಲಕ ದೇಶವನ್ನು ಕಾಯುತ್ತಿದ್ದರೆ ಯುವಕರು ಧರ್ಮಜಾಗೃತಿ ಮಾಡುವ ಮೂಲಕ ಭಾರತ ಮಾತೆಯ ಸೇವೆ ಮಾಡುತ್ತಿದ್ದಾರೆ. ಇಲ್ಲಿನ ಯುವಕರು ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧರನ್ನು ಸಮ್ಮಾನಿಸಿರುವುದು ಹೆಮ್ಮೆ ಎನಿಸಿದೆ ಎಂದರು. ಶಾಸಕ ಡಾ| ವೈ ಭರತ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸೈನಿಕ ದಿ| ಗಿರೀಶ್ ಪೂಜಾರಿ ಅವರ ಮಾತೃಶ್ರೀ ಮೋಹಿನಿ ಹಾಗೂ ರಾಷ್ಟ್ರ ಮಟ್ಟದ ಫೆÇ್ಲೀರ್ ಬಾಲ್ ಆಟಗಾರ್ತಿ ಆಶಿಕಾ ವೈ ಕೋಟ್ಯಾನ್ ಕಲ್ಲಾಡಿ ಅವರನ್ನು ಸಮ್ಮಾನಿಸಲಾಯಿತು.
ವೇದಿಕೆಯಲ್ಲಿ ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಜಿ.ಪಂ. ಸದಸ್ಯ ಜನಾರ್ದನ ಗೌಡ, ತಾಪಂ ಸದಸ್ಯ ನಾಗೇಶ್ ಶೆಟ್ಟಿ, ಬಾರ್ದಿಲ ಕ್ಷೇತ್ರದ ಆಡಳಿತ ಮೊಕ್ತೇಸರ ಸೋಮಶೇಖರ ಶೆಟ್ಟಿ, ಶ್ರೀಕ್ಷೇತ್ರ ಇರುವೈಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಪೂವಪ್ಪ ಸಾಲ್ಯಾನ್, ವಿಹಿಂಪ ಕುಪ್ಪೆಪದವು ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ. ರಾಜೇಶ್ ಶೆಟ್ಟಿ ಉಳಿಪಾಡಿಗುತ್ತು, ಮುತ್ತೂರು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ, ಭಜರಂಗದಳ ಕುಪ್ಪೆಪದವು ಸಂಚಾಲಕ ಚಂದ್ರಹಾಸ ಅಗರಿ, ಇರುವೈಲು ಭಜರಂಗ ದಳ ಸಂಚಾಲಕ ದಿನೇಶ್ ಕೋಟ್ಯಾನ್, ವಾಸುಪೂಜಾರಿ ಕಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದವರನ್ನು ಗೌರವಿಸಲಾಯಿತು.
ಗಣೇಶ್ ಬಾರ್ದಿಲ ಸ್ವಾಗತಿಸಿದರು. ಧನಂಜಯ ಶೆಟ್ಟಿ ವಂದಿಸಿದರು. ಪದ್ಮನಾಭ ಬಾರ್ದಿಲ ನಿರೂಪಿಸಿದರು.