ಮುಡಿಪು:ದ ಕ ಜಿ ಪಂ ಉ ಹಿ ಪ್ರಾ ಶಾಲೆ ಇರಾ ತಾಳಿತ್ತಬೆಟ್ಟುವಿನಲ್ಲಿ ಕರ್ನಾಟಕ ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿತರಿಸಿದ ಉಚಿತ ಸೈಕಲ್ ನ್ನು 8ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ರವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
ವಿದಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸಲು ಮತ್ತು ಗ್ರಾಮೀಣಾ ಬಾಗದ ವಿದ್ಯಾರ್ಥಿಗಳಿಗೆ ಅನಿಕೂಲವಾಗಲೆಂದು ಸರಕಾರವು 2006-2007 ರಿಂದ ಸೈಕಲ್ ವಿತರಿಸಲಾಗುತ್ತಿದ್ದು , ಅದರಂತೆ 2018-2019 ನೇ ಸಾಲಿನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇರಾ ಶಾಲೆಯಲ್ಲಿ ಎಲ್ಲಾ ಪೊಷಕರು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಉಚಿತ ಸೈಕಲನ್ನುನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಆಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೀಯುತ ಅಬ್ದುಲ್ ರಝಾಕ್ ಕುಕ್ಕಾಜೆ ರವರು ಉಚಿತ ಸೈಲ್ ವಿತರಣಾ ಕಾರ್ಯಕ್ರಮವು , ಸರಕಾರದ ಒಂದು ಉತ್ತಮ ಕಾರ್ಯಾಕ್ರಮವಾಗಿದ್ದು ವಿದ್ಯಾರ್ಥಿಗಳು ಸೈಕಲನ್ನು ಅಪಾಯಗಳಿಗೆ ಅಹ್ವಾನ ನೀಡದೆ ಧನಾತ್ಮವಾಗಿ ಬೇಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಎಸ್ ಡಿ ಎಂ ಸಿ ನಾಮನಿರ್ದೆಸಿತ ಸದಸ್ಯರಾದ ಮೊಯಿದೀನ್ ಕುಂಞರವರು ಆಗಮಿಸಿದ್ದರು. ಅಲ್ಲದೇ ಎಸ್ ಡಿ ಎಂ ಸಿ ಅದ್ಯಕ್ಷರಾದ ರಾಜೇಶ್ ಡಿಸೋಜರವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಶುಭ ಕೋರಿದರು. ಇಲಾಖಾ ಅದಿಕಾರಿ ಗಣೇಶ್, ಎಸ್ ಡಿ ಎಂ ಸಿ ಉಪಾದ್ಯಕ್ಷರಾದ ಚಂದ್ರಿಕಾ ಆರ್, ಕರ್ಕೆರ ಶಾಲಾ ಮುಖ್ಯ ಶಿಕ್ಷಕಿಯಾದ ಸುಜಾತ ಟಿ ಎಸ್ ಮತ್ತು ಇತರ ಶಿಕ್ಷಕರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಶಶಿ ಬಿ ರವರು ಸ್ವಾಗತಿಸಿ, ಪದವೀಧರ ಶಿಕ್ಷಕರಾದ ಶಂಕರ ರವರು ಪ್ರಾಸ್ತಾವಿಕ ನುಡಿದರು. ಹೀಂದಿ ಶಿಕ್ಷಕಿಯಾದ ಸುಮಂಗಳಾ ಶರ್ಮಾ ರವರು ಧನ್ಯವಾದ ಅರ್ಪಿಸಿದರು ಮತ್ತು ಕಾರ್ಯಕ್ರಮವನ್ನು ಶಿಕ್ಷಕರಾದ ಜೋನ್ ಆಂತೋನಿ ಪೇರ್ನಾಂಡಿಸ್ ರವರು ನಿರೂಪಿಸಿದರು