ಅಮ್ಮುಂಜೆ: ಜಮ್ಮು ಕಾಶ್ಮೀರದ ಪುಲ್ವಾನದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಭಾನುವಾರ ವೀರಯೋಧ ಯಾಧವ ಫ್ರೆಂಡ್ಸ್ ಇದರ ವತಿಯಿಂದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಅಮ್ಮುಂಜೆ ಶಾಲಾ ಮೈದಾನದಿಂದ ಹೊರಟ ನಾಗರಿಕರು ಭಾರತ್ ಮಾತೆಯ ಘೋಷನೆಯನ್ನು ಕೂಗುತ್ತಾ ವೀರಯೋಧ ಯಾಧವ ಫ್ರೆಂಡ್ಸ್ ಇದರ ಅಮರಶ್ರೀ ಕಟ್ಟಡದವರೆಗೆ ಹಣತೆಯನ್ನು ಹಚ್ಚಿಕೊಂಡು ಮೌನವಾಗಿ ಸಾಗಿದರು.ನಿವೃತ ವೀರ ಯೋಧಅನೀಶ್ ಆಚಾರ್ಯ ಹಾಗೂ ಹಿರಿಯರಾದ ಅಮ್ಮುಂಜೆ ವಿನೋದ್ ನಾಯಕ್ ಅವರು ಹಣತೆ ದೀಪ ಬೆಳಗಿಸಿದರು.
ಕರುಣಾಕರ ಆಳ್ವ, ದೇವ್ ದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಗ್ರಾ,ಪಂ ಅಧ್ಯಕ್ಷೆ ಪ್ರೇಮಲತಾ ಲಕ್ಷ್ಮಣ್ ಪೂಜಾರಿ, ಚಂದ್ರಶೇಖರ ಭಂಡಾರಿ, ಪೊಳಲಿ ವ್ಯ.ಸೇ. ಸಹಕಾರಿ ಸಂಘದ ನಿರ್ದೇಶಕ ಅಬುಬಕ್ಕರ್, ಉಮೇಶ್ ಬಾರಿಂಜೆ, ಜನಾರ್ಧನ ಅಮ್ಮುಂಜೆ ಜನಾರ್ಧನ ಬಾರಿಂಜೆ, ಪಿಡಬ್ಲ್ಯೋ ಅಬುಬಕ್ಕರ್, ರವೀಂದ್ರ ಸುವರ್ಣ, ದೊಡ್ಡಪ್ಪ ಮಾಸ್ಟರ್, ವೀರ ಯೋಧ ಯಾಧವ ಫ್ರೆಂಡ್ಸ್ ಇದರ ಅಧ್ಯಕ್ಷ ಪ್ರಶಾಂತ್ ಕುಲಾಲ್ ಮತ್ತು ಪಧಾಧಿಕಾರಿಗಳು ಇದ್ದರು ಆರಂಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪಾಡಿಯವರು ಭಾರತ್ ಮಾತೆಯ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ನಮನ ಸಲ್ಲಿಸಿದರು.








