ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಭಾರತೀಯ ಜೀವ ವಿಮಾ ನಿಗಮ ಶಾಖೆ ವತಿಯಿಂದ ಒಂದು ವಾರ ತನಕ ನಡೆದ ’58ನೇ ವಿಮಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಫರಂಗಿಪೇಟೆ ಶ್ರೀ ಮಾತಾಲಕ್ಷ್ಮಣಿ ಶಾಂತಿಧಾಮ ಎಂಬ ವೃದ್ಧಾಶ್ರಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಉಚಿತ ಆಹಾರ ಸಾಮಾಗ್ರಿ ವಿತರಿಸಲಾಯಿತು.

ಶಾಖಾಧಿಕಾರಿ ಸಿ.ಚಂದ್ರು, ಆಡಳಿತಾಧಿಕಾರಿ ಬಿ.ಎಸ್.ನಾಯಕ್, ಪ್ರಮುಖರಾದ ವೆಂಕಪ್ಪ, ರಾಮಯ್ಯ ಶೆಟ್ಟಿ, ಶ್ಯಾಮಲ ಆರ್.ನಾಯಕ್, ರಮಾನಂದ ಭಟ್, ಮಧ್ವರಾಜ್ ಕಲ್ಮಾಡಿ, ವಸಂತ ಶೆಟ್ಟಿ, ಸತೀಶ್, ಸೌಂದರ್ಯರಾಜ್, ದಿನೇಶ ಎಂ., ಗೀತಾ, ರೂಪಾ, ರಘುಚಂದ್ರ ಮತ್ತಿತರರು ಉಪಸ್ಥಿತರಿದ್ದರು.