ಕೈಕಂಬ: ಶ್ರೀ ಕ್ಷೇತ್ರ ಇರುವೈಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಸಭಾಭವನ ಮತ್ತು ಅನ್ನಛತ್ರದ ಉದ್ಘಾಟನೆಯು ಫೆ 19ರಂದು ಮಂಗಳವಾರ ರಾತ್ರಿ 7 ಗಂಟೆಗೆ ಉದ್ಘಾಟನೆಯಾಗಲಿದೆ.
ಮಿಜಾರುಗುತ್ತು ಆನಂದ ಆಳ್ವ ಸಭಾಭವನದ ಉದ್ಘಾಟನೆಯನ್ನು ಮಾಡಲಿದ್ದಾರೆ. ಅನ್ನಛತ್ರದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮರನಾಥ್ ಶೆಟ್ಟಿ,ಅಭಯಚಂದ್ರ ಜೈನ್,ಪದ್ಮನಾಭ ಕೋಟ್ಯಾನ್,ಡಾ.ಬಿ.ಶ್ರೀನಿವಾಸ ಆಸ್ರಣ್ಣ ಕಿನ್ನಿಗೋಳಿ,ವಕೀಲ ಶರತ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಕ್ಷೇತ್ರದ ವತಿಯಿಂದ ಸನ್ಮಾನ:
ಹಿರಿಯ ಕೃಷಿಕ ಶತಾಯುಷಿ ಎಮ್ ಆನಂದ ಆಳ್ವ,ಶಾಂತಪ್ಪ ಪೂಜಾರಿ ನೂಯಿ ಇರುವೈಲ್, ಡಾ.ಐ ಶ್ರೀನಿವಾಸ ಆಸ್ರಣ್ಣ, ದಿವಾಕರ ಪೂಜಾರಿ, ಮನೋಜು ಶೆಟ್ಟಿ ಕಾರಮೊಗರು  ಇವರನ್ನು    ಕ್ಷೇತ್ರದ ವತಿಯಿಂದ ಸನ್ಮಾನಿಸಲಿದ್ದಾರೆ. ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *