ಸುದ್ದಿ 9: ಬಂಟ್ವಾಳ: ಜೀವನದಲ್ಲಿ ಪ್ರತಿಯೊಬ್ಬರು ಕೂಡಾ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣದ ಜೊತೆಗೆ ಪರಸ್ಪರ ಸಾಮರಸ್ಯ ಮತ್ತು ಸೇವಾ ಮನೋಭಾವದಿಂದ ಸಂಘಟಿತರಾಗಬೇಕು ಎಂದು ಕಸ್ತೂರ್ಬ ಮೆಡಿಕಲ್ ಕಾಲೇಜಿನ ಪ್ರೊ.ಎಂ.ಎಸ್.ಕೋಟ್ಯಾನ್ ಹೇಳಿದ್ದಾರೆ.
ತಾಲ್ಲೂಕಿನ ಬಿಲ್ಲವರ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಭಾನುವಾರ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 160ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಬಿಲ್ಲವ ಮಹಾಮಂಡಲ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ವೈದಿಕಗುರು ಪಟ್ಲಕೆರೆ ನಾರಾಯಣ ಶಾಂತಿ ಮತ್ತು ರೇಕಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ ಇವರನ್ನು ಸನ್ಮಾನಿಸಲಾಯಿತು.
ಸಂಘದ ಪ್ರಮುಖರಾದ ರಾಘವ ಅಮೀನ್, ತಿಮ್ಮಪ್ಪ ಪೂಜಾರಿ, ರಾಜೇಶ ಮತ್ತಿತರರು ಇದ್ದರು.
ಬೇಬಿ ಕುಂದರ್ ಸ್ವಾಗತಿಸಿ, ಬಿ.ಗಿರೀಶ ಪೂಜಾರಿ ವಂದಿಸಿದರು. ಶ್ರೀಧರ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

2
—

By suddi9

Leave a Reply

Your email address will not be published. Required fields are marked *