ಸುದ್ದಿ 9 : ಬಂಟ್ವಾಳ:ದೇಶದಲ್ಲಿ ಮದುವೆ ಎಂಬುದು ಹಲವಾರು ಕುಟುಂಬಗಳನ್ನು ಪರಸ್ಪರ ಬೆಸೆಯುವ ಮತ್ತು ಜೀವನ ಪರ್ಯಂತ ಜೊತೆಯಾಗಿ ರಾಷ್ಟ್ರೀಯತೆ ಮೆರೆಯುವ ವ್ಯವಸ್ಥೆಯಾಗಿದೆ. ಆ ಮೂಲಕ ಸದೃಢ ಮತ್ತು ರಾಷ್ಟ್ರಭಕ್ತ ಮಕ್ಕಳನ್ನು ಸುಸಂಸ್ಕೃತರನ್ನಾಗಿ ದೇಶಕ್ಕೆ ನೀಡಲು ಸಾಧ್ಯವಿದೆ ಎಂದು ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಸು.ರಾಮಣ್ಣ ಹೇಳಿದ್ದಾರೆ.
ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ನವದಂಪತಿಗಳ ಸಮಾವೇಶ’ದಲ್ಲಿ ಅವರು ಮಾರ್ಗದರ್ಶನ ನೀಡಿದರು.
ಆರ್ಎಸ್ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತನಾಡಿ, ಮದುವೆ ಎಂಬ ವ್ಯವಸ್ಥೆ ಜೊತೆಗೆ ದೇಶೀಯ ಸಂಸ್ಕೃತಿ ಮತ್ತು ಧರ್ಮ ಪಾಲನೆ ಜವಾಬ್ದಾರಿಯೂ ಇದೆ ಎಂದರು.
ಆರಂಭದಲ್ಲಿ ಹಿರಿಯ ದಂಪತಿ ಬಿ.ರಘು ಲಕ್ಷ್ಮೀ ಸಪಲ್ಯ ಇವರು ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ ಮತ್ತಿತರರು ಇದ್ದರು.
3

By suddi9

Leave a Reply

Your email address will not be published. Required fields are marked *