ಸುದ್ದಿ9:ಬಂಟ್ವಾಳ:ಜಿಲ್ಲೆಯಲ್ಲಿ ಪುರಾತನ ಮತ್ತು ಕಾರಣಿಕ ಕ್ಷೇತ್ರವಾಗಿ ರೂಪುಗೊಂಡಿರುವ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಹಂತ ಹಂತವಾಗಿ ಅಭಿವೃದ್ಧಿಗೊಂಡು ಭಕ್ತರಿಗೆ ಮಾನಸಿಕ ನೆಮ್ಮದಿ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಇದ್ದರು.
ತಾಲ್ಲೂಕಿನ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ರೂ.25ಲಕ್ಷ ವೆಚ್ಚದಲ್ಲಿ ನಿಮರ್ಾಣಗೊಳ್ಳಲಿರುವ ದಕ್ಷಿಣ ಗೋಪುರ ನಿಮರ್ಾಣ ಕಾಮಗಾರಿಗೆ ಭಾನುವಾರ ಸಂಜೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಪಡ್ಯಾರಬೆಟ್ಟು ಕ್ಷೇತ್ರ ಆಡಳಿತದಾರ ಜೀವಂಧರ ಕುಮಾರ್, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ, ಸಿವಿಲ್ ಎಂಜಿನಿಯರ್ ಜಗದೀಶ ಶೆಟ್ಟಿ ಗುರುಪುರ ಮತ್ತಿತರರು ಶುಭ ಹಾರೈಸಿದರು.
ತಾ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ವಸಂತ ಕುಮಾರ್ ಅಣ್ಣಳಿಕೆ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಗರಡಿ ಆಡಳಿತ ಮೊಕ್ತೇಸರ ಚಂದನಾದೇವಿ ಪಿ.ಜೈನ್, ಮೊಕ್ತೇಸರ ಸನತ್ ಕುಮಾರ್ ರೈ, ಕೇಲ್ದೋಡಿಗುತ್ತು ಕೋಟಿ ಪೂಜಾರಿ, ಜೀಣರ್ೋದ್ಧಾರ ಸಮಿತಿ ಕಾಯರ್ಾಧ್ಯಕ್ಷ ಪ್ರಕಾಶ ಕುಮಾರ್ ಜೈನ್ ಪೀದರ್ೊಟ್ಟು, ಗೌರವಾಧ್ಯಕ್ಷ ಶ್ರೀಪತಿ ಭಟ್ ಪುಂಚೋಡಿ, ಅಧ್ಯಕ್ಷ ಕೆ.ಎನ್.ಶೇಖರ್, ಪ್ರಮುಖರಾದ ರವಿ.ಆರ್.ಪೂಜಾರಿ, ಗಣೇಶ ಪ್ರಭು, ಕೃಷ್ಣರಾಜ್ ಜೈನ್, ದೇಜಪ್ಪ ಸಾಲ್ಯಾನ್, ಜಯ ಕುಂದರ್ ಮತ್ತಿತರರು ಇದ್ದರು.
ಇದೇ ವೇಳೆ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಪೂಜಾರಿ ಮತ್ತು ಮಾಜಿ ಕೋಶಾಧಿಕಾರಿ ನಾರಾಯಣ ಶೆಟ್ಟಿ ಇವರಿಗೆ ಸನ್ಮಾನ ಹಾಗೂ ಕೊಡಮಣಿತ್ತಾಯ ದೈವದ ‘ಸೋಣ ನೇಮೋತ್ಸವ’ ನಡೆಯಿತು.
5

4

By suddi9

Leave a Reply

Your email address will not be published. Required fields are marked *