ಪೊಳಲಿ: ಸಮಾಜದಲ್ಲಿ ಇಂದು ಆಧ್ಯಾತ್ಮ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದಿಂದ ಆಧ್ಯಾತ್ಮಿಕ ಅನುಭೂತಿ ಉಂಟಾಗುತ್ತದೆ. ಪೊಳಲಿಯಲ್ಲಿ ಆಧ್ಯಾತ್ಮ ಸಂಪತ್ತು ಅಗಾಧವಾಗಿರುವುದು ಮನಸ್ಸಿಗೆ ಗೋಚರವಾಗುತ್ತಿದೆ. ಎಲ್ಲ ಸಂಬಂಧಗಳಿಗಿಂತ ಭಕ್ತ ಹಾಗೂ ಭಗವಂತನ ಸಂಬಂಧ ಅತಿ ಶ್ರೇಷ್ಠವಾಗಿದೆ. ಪೊಳಲಿ ದೇಗುಲದ ನವೀರಕರಣ ಕೆಲಸವು ಇತಿಹಾಸದ ಪುಟಗಳಲ್ಲಿ ದಾಖಲಾಗುವ ಸುವರ್ಣಾವಕಾಶವಾಗಿದೆ.

6vp dharmika sabe ಪೊಳಲಿ ದೇಗುಲವು ಇಂದು ಸಂಪೂರ್ಣ ಪುನರ್‍ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆಯುತ್ತಿರುವುದರಿಂದ ಇಡೀ ದೇಶಕ್ಕೆ ಶ್ರೇಯಸ್ಕರ ಎಂದು ಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

swamiji
ಅವರು ಮಾ.6ರಂದು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮೂರನೇ ದಿನದ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ, ಆಶೀರ್ವನ ನೀಡಿ ಮಾತನಾಡುತ್ತಿದ್ದರು.
ಆನೆಗುಂಡಿ ಮಹಾಸಂಸ್ಥಾನಂ ಇದರ ಕಾಳಹಸ್ತೇಂದ್ರ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡಿ ಮಾತನಾಡಿ, ಸಂಪತ್ತು ಸದ್ವಿನಿಯೋಗವಾಗಬೇಕು ಸದ್ವಿಚಾರಗಳಿಗೆ ಉಪಯೋಗವಾಗಬೇಕು. ಯಾವುದೇ ಅಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ಸೇವೆ ಮಾಡಿದರೆ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ನುಡಿದರು.

swamiji-2
ಖ್ಯಾತ ವಿದ್ವಾಂಸ ಹಿರಣ್ಯ ವೆಂಕಟೇಶ ಭಟ್ ಧಾರ್ಮಿಕ ಉಪನ್ಯಾಸಗೈದು ಪೊಳಲಿಯ ಸಮಗ್ರ ಇತಿಹಾಸವನ್ನು ವಿವರಸಿದರು. ಪೊಳಲಿ ಈ ಮುಂಚೆ ಪುಲಿನ ಎಂದು ಕರೆಯಲ್ಪಡುತ್ತಿದ್ದು, ಇದರ ಬಗ್ಗೆ ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖವಿದೆ. ಸುರಥ-ಸಮಾಧಿ ಇಬ್ಬರು ದೇಶಭ್ರಷ್ಟಗೊಂಡು ಸುಮೇಧ ಮಹರ್ಷಿಗಳ ಅನುಗ್ರಹಕ್ಕೊಳಗಾಗಿ ದೇವಿಯ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿಅನುಗ್ರಹಗೊಂಡ ಕಥೆ ಇದ್ದು ಇಂದು ಅದೇ ಕ್ಷೇತ್ರ ಪೊಳಲಿಯಾಗಿ ನವೀಕರಣಗೊಂಡಿದೆ ಎಂದು ವಿವರಿಸಿದರು.

swamiji-3
ಕರ್ಣಾಟಕ ಬ್ಯಾಂಕ್‍ನ ಸಿಇಓ ಮಹಬಲೇಶ್ವರ ಎಂ.ಎಸ್. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರಾಜ್ಯ ಧಾರ್ಮಿಕ ಪರಿಷತ್‍ನ ಪದ್ಮನಾಭ್ ಕೋಟ್ಯಾನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಗಾಣಿಗ ಸಂಘದ ಅಧ್ಯಕ್ಷ ವಿಠಲ ಸಪಳಿಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ಮಹೇಶ್ ಭಟ್, ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಡಾ| ಮಂಜಯ್ಯ ಶೆಟ್ಟಿ, ಚೇರ ಸೂರ್ಯ ನಾರಾಯಣ ರಾವ್, ಯು. ಟಿ. ಆಳ್ಬಾ ಮುಂತಾದವರು ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಉಪನ್ಯಾಸಕ ರಾಮ್ ಪ್ರಸಾದ್ ಸಮಗ್ರ ಕಾರ್ಯಕ್ರಮ ನಿರ್ವಹಿಸಿದರು.

swamiji-4
ಶಿಲೆಕಲ್ಲಿನ ಶಿಲ್ಪಿ ಕೆ.ಎಸ್. ವಿಶ್ವನಾಥ್, ಕಾಷ್ಠ ಶಿಲ್ಪಿಗಳಾದ ರಾಜೇಶ್ ಆಚಾರ್ಯ ಹಾಗು ಹರೀಶ್ ಆಚಾರ್ಯ , ತಾಮ್ರದ ಕೆಲಸದ ಗುತ್ತಿಗೆಗಾರರಾದ ಶ್ರೀಧರ ಉಜಿರೆ ಇವರನ್ನು ಸಮ್ಮಾನಿಸಲಾಯಿತು.

 

By suddi9

Leave a Reply

Your email address will not be published. Required fields are marked *