ಸುದ್ದಿ9:ಬಂಟ್ವಾಳ; ಮಕ್ಕಳು ಸರ್ವಾಂ ಗೀಣ ಬೆಳವಣಿಗೆಯೊಂದಿಗೆ ಮೂಲಭೂತ ವ್ಯವಸ್ಥೆಗಳನ್ನು ಹೊಂದಿ ಉತ್ತಮ ವ್ಯಕ್ತಿಯಾಗಿ ನಿರ್ಮಾಣಗೊಂಡು ಗುರುತಿಸಲ್ಪಡಬೇಕಾದರೆ ಕಾಲೇಜು ಶಿಕ್ಷಣ ಅಗತ್ಯ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಸೋಮವಾರ ಬಂಟ್ವಾಳ ತಾಲೂಕು ಸಿದ್ಧಕಟ್ಟೆ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ವಿದ್ಯಾ ರ್ಥಿ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿಯೂ ಕಾಲೇಜು ಶಿಕ್ಷಣದ ಲಭ್ಯತೆಗಾಗಿ ಸರಕಾರ ಯೋಜನೆಗಳನ್ನು ರೂಪಿಸಿದ್ದು ಸಿದ್ಧಕಟ್ಟೆ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸುವ ಚಿಂತನೆ ಸರಕಾರದ ಮುಂದಿದೆ. ಇದರಿಂದ ಪರಿಸರದವರಿಗೆ ಹೆಚ್ಚಿನ ಅನುಕೂಲತೆ ದೊರೆಯಲಿದೆ ಎಂದು ನುಡಿದ ಅವರು ವಿದ್ಯಾಥರ್ಿಗಳ ಅಭಿವೃದ್ಧಿಗೆ ವಿದ್ಯಾಥರ್ಿ ಸಂಘಗಳು ಅಗತ್ಯವಾಗಿದೆ. ಆದರೆ ಚುನಾವಣೆಯ ಅನಿವಾರ್ಯತೆ ಇರಬಾರದು ಎಂದು ನುಡಿದರು.
ಕಾವೂರು ಸ.ಪ್ರ.ದ.ಕಾಲೇಜು ಉಪನ್ಯಾಸಕ ಡಾ|ಶ್ರೀಧರ ಮಣಿಯಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಪ್ರೊ| ಸತ್ಯನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಪ್ರಾಂಶುಪಾಲ ಎನ್.ಪದ್ಮನಾಭ ರೈ , ಕಾಲೇಜು ಅಭಿವೃದ್ಧಿ ಸಮಿತಿ ಕಾಯರ್ಾಧ್ಯಕ್ಷ ಲೋಕೇಶ ಶೆಟ್ಟಿ , ವಿದ್ಯಾಥರ್ಿಪಾಲನಾ ಮೇಲ್ವಿಚಾರಕಿ, ಉಪನ್ಯಾಸಕಿ ನಸೀಮಾ ಬೇಗಂ, ಪ್ರೌಢ ಶಾಲಾ ಮುಖ್ಯಶಿಕ್ಷಕ ರಮಾನಂದ, ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶಿವಾನಂದ ರೈ , ಅಶೋಕ ಆಚಾರ್ಯ, ಸೀತಾರಾಮ ಶೆಟ್ಟಿ , ಮಧ್ವರಾಜ್ ಜೈನ್, ಜಯಕರ ಶೆಟ್ಟಿ , ದಿನೇಶ್ ಶೆಟ್ಟಿಗಾರ್, ಗಣೇಶ್ನಾಯಕ್ ಕಪರ್ೆ, ಎಸ್.ಎಂ.ಹುಸೇನ್, ಸ.ಪ.ಪೂ.ಕಾಲೇಜು ಅಭಿವೃದ್ಧಿ ಸಮಿತಿ ಕಾಯರ್ಾಧ್ಯಕ್ಷ ಪ್ರಭಾಕರ ಪ್ರಭು, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೀತಾರಾಮ ಪೂಜಾರಿ, ಉಪನ್ಯಾಸಕರಾದ ವಿದ್ಯಾಧರ ಹೆಗ್ಡೆ , ಪ್ರಸನ್ನ ಕುಮಾರ್, ಸೌಮ್ಯ , ಗ್ರಂಥಪಾಲಕ ಶ್ರೀನಿವಾಸ್, ಶಿಕ್ಷಕ ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾ ರ್ಥಿವೇದಿಕೆ ಅಧ್ಯಕ್ಷ ಸುದರ್ಶನ್ ಅವರು ಸ್ವಾಗತಿಸಿದರು. ಕಾರ್ಯದಶರ್ಿ ಕು| ದಿವ್ಯಜ್ಯೋತಿ ಡಿಕೋಸ್ತ ವಂದಿಸಿದರು. ಸಾಂಸ್ಕೃತಿಕ ಕಾರ್ಯದಶರ್ಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.





