ಪೊಳಲಿ: ಪೊಳಲಿ ದೇವಸ್ಥಾನಕ್ಕೆ ಬಹುಭಾಷಾ ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಒಬ್ಬರು ಚಿತ್ರ ನಟಿಯಾಗಿದ್ದುಕೊಂಡು ಸುಮಲತಾ ಅವರನ್ನು ಬೆಂಬಲಿಸುತ್ತೀರಾ ಎನ್ನುವ ಪ್ರಶ್ನೆಗೆ, ನಾನು ಪೊಳಲಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ನಾನೀಗಲೇ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಬೇರೆಯವರನ್ನು ಬೆಂಬಲಿಸುವುದಿಲ್ಲ ಬದಲಿಗೆ ನನ್ನ ಪಕ್ಷದವರಿಗೆ ಸಹಕಾರ ನೀಡುತ್ತೇನೆ.

12vp malavikaಎಲ್ಲವನ್ನೂ ವರಿಷ್ಠರ ನಿರ್ಧಾರಕ್ಕೆ ಬಿಟ್ಟಿದ್ದೇನೆ. ನಾನೊಬ್ಬಳು ಕಲಾವಿದೆ ನಿಜ. ಆದರೆ ನಾನೊಬ್ಬಳು ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ಎಂದು ತಿಳಿಸಿದರು. ಪೊಳಲಿ ಆಡಳಿತ ಮಂಡಳಿಯವರು, ಮೊಕ್ತೇಸರ ವರ್ಗದವರು, ಅರ್ಚಕ ವೃಂದದವರು ಮುಂತಾದವರು ಇದ್ದರು.

By suddi9

Leave a Reply

Your email address will not be published. Required fields are marked *