ಪೊಳಲಿ:ದೇವರು ಯಾವುದನ್ನು ತನ್ನ ಭಕ್ತರಿಗೆ ಪ್ರಸನ್ನಳಾಗಿ ಕೊಡುತ್ತಾಳೋ ಅದನ್ನೇ ಪ್ರಸಾದ ಎನ್ನುತ್ತಾರೆ. ಈ ಪ್ರಸಾದವನ್ನು ಸ್ವೀಕರಿಸಿದ ಭಕ್ತನಿಗೆ ಧೈರ್ಯ, ಆತ್ಮವಿಶ್ವಾಸ, ಇಚ್ಛಾಶಕ್ತಿ ಮೂಡಿಕೊಂಡು ಕೆಲಸದಲ್ಲಿ ವಿಜಯ ಸಾಧಿಸಲು ಸಾಧ್ಯವಾಗುತ್ತದೆ. ಶ್ರೀರಾಜರಾಜೇಶ್ವರಿಯು ಜಗತ್ತಿನ ಅದಿದೇವತೆಯಾಗಿದ್ದಾಲೆ. ದೇವಿಯ ಮೂರು ಶಕ್ತಿ ಪ್ರಕಾರಗಳಲ್ಲಿ ಬ್ರಹ್ಮನಿಗೆ ಪ್ರಪಂಚವನ್ನು ಸೃಷ್ಟಿ ಸರಸ್ವತಿಯಿಂದ ಜ್ಞಾನಶಕ್ತಿ ಬಂದಿತು. ಜಗತ್ತನ್ನು ರಕ್ಷಣೆ ಮಾಡಲು ಮಹಾವಿಷ್ಣುವಿಗೆ ಲಕ್ಷ್ಮಿಯಿಂದ ಜ್ಞಾನಶಕ್ತಿ ಬಂದಿತು. ಶಿವಶಕ್ತಿಯ ಅಂತಿಮವಾದ ಜಗತ್ತಿನ ನಶ್ವರತೆಯನ್ನು ಕಲಿಸುವಂಥಾ ಜ್ಞಾನಶಕ್ತಿ ದುರ್ಗಾಶಕ್ತಿಯಿಂದ ಬಂದಿದೆ. ಶ್ರೀದೇವಿಯು ನಿರಾಕಾರ ಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ವಿದ್ವಾಂಸ ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಿಸಿದ್ದಾರೆ.

12vp sripolali
ಅವರು ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ. 12ರಂದು ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

12vpsripolali
ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಉತ್ತರ ಪ್ರದೇಶದಲ್ಲಿ ಕುಂಭಮೇಳ ಎಷ್ಟು ವಿಜ್ರಂಭಣೆಯಿಂದ ನಡೆಯಿತೋ ದಕ್ಷಿಣದಲ್ಲಿ ಪೊಳಲಿ ರಾಜರಾಜೇಶ್ವರಿ ಪರಿವಾರ ದೇವರುಗಳ ಬ್ರಹ್ಮಕಲಶೋತ್ಸವವು ಅಷ್ಟೇ ವಿಜ್ರಂಭಣೆಯಿಂದ ನಡೆಯುತ್ತಿದೆ. ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಎಲ್ಲರಿಗೂ ದೇವರ ದರ್ಶನ ಭಾಗ್ಯ ಸಿಗುತ್ತಿದೆ. ನಮ್ಮ ದೇಶಕ್ಕೆ ಹಲವರು ದಂಡೆತ್ತಿ ಬಂದವರು ಸಾವಿರಾರು ದೇವಸ್ಥಾನಗಳನ್ನು ನಾಶಗೊಳಿಸಿದರು. ಆದರೆ ಇಂದು ದೇವರ ಕೃಪೆ ಹಾಗೂ ಇಲ್ಲಿನವರ ಇಚ್ಛಾಶಕ್ತಿಯಿಂದ ನಶಿಸಿಹೋಗಿದ್ದ ಸಾವಿರಾರು ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ ಎಂದು ನುಡಿದರು,

12vp darmika sabe
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಏರ್ಯ ಲಕ್ಷ್ಮಿ ನಾರಾಯಣ ಆಳ್ವ ಮಾತನಾಡಿದರು. ಈ ವೇಳೆ ಹೊರರಾಜ್ಯಗಳಲ್ಲಿ ದೇಣಿಗೆ ಸಂಗ್ರಹಿಸಿದ ಭಕ್ತರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

000ಕಾರ್ಯಕ್ರಮದಲ್ಲಿ ಶ್ರೀ ರವೀಂದ್ರನಾಥ ಆಳ್ವ, ಪದ್ಮನಾಭ ಪಯ್ಯಡೆ ಕೂರಿಯಾಳ ಗುತ್ತು, ಆನಂದ್ ಶೆಟ್ಟಿ ಮುಂಬೈ, ದಿವಾಕರ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ಸುದೀರ್ ಶೆಟ್ಟಿ, ಅನ್ನಿ ಸಿ ಶೆಟ್ಟಿ, ಕುಸುಮಾರ್ ಡಿ. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್, ಡಾ| ಮಂಜಯ್ಯ ಶೆಟ್ಟಿ, ಯು.ಟಿ. ಆಳ್ವ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿಗಳಾದ ಮಹೇಶ್ ಮುನಿಯಂಗಳ, ಸಾಗರ ರಿಯಾಲ್ಟಿ ಪ್ರಮೋಶನ್‍ನ ಗಿರಿಧರ ಶೆಟ್ಟಿ, ಸಿವಿಲ್ ಇಂಜಿನಿಯರ್ ರಿತೇಶ ದಾಸ್ ಅವರನ್ನು ಸಮ್ಮಾನಿಸಲಾಯಿತು.

12vp sanmana

By suddi9

Leave a Reply

Your email address will not be published. Required fields are marked *