ನವದೆಹಲಿ: ಕಾಶ್ಮೀರಕ್ಕೆ ಅಪ್ಪಳಿಸಿದ್ದ ಪ್ರವಾಹದ ಸಂದರ್ಭ ತಪ್ಪಿಸಿಕೊಂಡಿದ್ದ ಪಾಕಿಸ್ತಾನದ ಉಗ್ರರು ಇದೀಗ ಮತ್ತೆ ಬಾಲ ಬಿಚ್ಚಿದ್ದಾರೆ. ಜಮ್ಮುವಿನ ಮಚ್ಚಿಲ್ ಸೆಕ್ಟರ್ ನಲ್ಲಿ ನಡೆದ ಸೇನಾ ಪಡೆ ಹಾಗೂ ಉಗ್ರರ ಮುಖಾಮುಖಿ ಕದನದ ನಡುವೆ ಭಾರತೀಯ ಸೈನಿಕರು ಇಬ್ಬರು ಉಗ್ರರನ್ನು ಕೊಂದು ಮುಗಿಸಿದ್ದಾರೆ.
ಉಗ್ರರಿಂದ ಒಂದು ಬಂದೂಕು ಮತ್ತು ಸ್ಪೋಟಕದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊನ್ನೆಯಷ್ಟೆ ಕುಪ್ಪಾರ ಜಿಲ್ಲೆಯಲ್ಲಿ ಗುಂಡಿನ ದಾಳಿಯಲ್ಲಿ ಐವರು ಉಗ್ರರು, ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದರು. ಈಗ ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ.
