ಕುಪ್ಪೆಪದವು : ಕುಳವೂರಿನ ತೇರೆಜಾಲು ದೊಂಪದ ಬಲಿ ಸಮಿತಿ ವತಿಯಿಂದ ಎ. 15ರಿಂದ 17ರ ತನಕ ಹತ್ತು ಸಮಸ್ತರ ಸಹಕಾರದಿಂದ ನಡೆಯಲಿದೆ. ಎ.16ರಂದು ಶ್ರೀ ಧೂಮಾವತಿ ಮತ್ತು ಕನಲ್ಲಾಯ ದೈವಗಳ ಭಂಡಾರ ಏರುವುದು. ರಾತ್ರಿ 10ಕ್ಕೆ ಮಹಿಷಂದಾಯ ಮತ್ತು ಧೂಮಾವತಿ ನೇಮ ಜರುಗಲಿದೆ. ಎ. 17ರಂದು ಕುಲವೂರಿನ ಶ್ರೀ ಧೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ) ಇದರ ಏಳನೇ ವಾರ್ಷಿಕೋತ್ಸವದಂಗವಾಗಿ ಸಂಜೆ 6:30ರಿಂದ ಲಕುಮಿ ತಂಡದವರಿಂದ `ಮಂಗೆ ಮಲ್ಪೊಡ್ಚಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 11ರಿಂದ ಕನಲ್ಲಾಯ, ಕಲ್ಕುಡ, ಕಾಳಮ್ಮ ದೈವಗಳ ನೇಮ ನಡೆಯಲಿದೆ. ಬಳಿಕ ಭಂಡಾರ ಇಳಿಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.