ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾವಳಪಡೂರು, ವಗ್ಗ ದ.ಕ.ಜಿಲ್ಲಾ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ವಿವಿದೊದ್ಧೇಶ ಅಭಿವೃದ್ಧಿ ಸಂಸ್ಥೆ ಇದರ ವತಿಯಿಂದ ವಗ್ಗ ಸ.ಪ.ಪೂ.ಕಾಲೇಜು ಸಭಾಂಗಣದಲ್ಲಿ 128ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಎ.14ರಂದು ಜರಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಲಿತ ಮುಖಂಡ, ಹೋರಾಟಗಾರ, ರಘುವೀರ್ ಸೂಟರ್ ಪೇಟೆ ಅವರು ಅಂಬೆಡ್ಕರ್ ಜಯಂತಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರುಕ್ಮಯ ಬಂಗೇರ, ಕಾರ್ಯದರ್ಶಿ ಕರುಣಾಕರ, ಶಿವಾನಂದ, ಶಿವರಾಜ್ ಉಳ್ಳಾಲ್ ಮತ್ತು ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.
