ಬಂಟ್ವಾಳ: ಬುಧವಾರ ಮಧ್ಯರಾತ್ರಿ ತೆಂಗಿನ ಮರಕ್ಕೆ ಹಾಗೂ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಅಲಾಡಿ ಎಂಬಲ್ಲಿ ಸಂಭವಿಸಿದ್ದು, ಪರಿಣಾಮ ಮೂರು ತೆಂಗಿನ ಮರ ಸುಟ್ಟರೆ, ಮನೆ ಗೊಡೆ ಬಿರುಕು ಬಿಟ್ಟಿದೆ.

ಸಜೀಪ ಮುನ್ನೂರು ಗ್ರಾಮದ ಅಲಾಡಿ ನಿವಾಸಿ ಭರತ್ ಕುಮಾರ್ ಎಂಬವರ ಮನೆಯ ಎದುರಿನ ತೆಂಗಿನ ಮರಕ್ಕೆ ಬಡಿದ ಸಿಡಿಲು ಬಳಿಕ ಮನೆಗೆ ಬಡಿಯಿತು. ಪರಿಣಾಮ ಮನೆಯೊಳಗೆ ಗೋಡೆ ಬಿರುಕು ಬಿಟ್ಟರೆ, ಮನೆಯ ವಿದ್ಯುತ್ ವಯರ್ ಗಳು , ಸ್ವಿಚ್ ಬೋರ್ಡುಗಳು ಸುಟ್ಟು ಹೋಗಿವೆ. ಮನೆಯವರಿಗೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ.
ಹಾಗೆಯೇ ಮೂರು ತೆಂಗಿನ ಮರಗಳು ಕೂಡ ಕರಟಿ ಹೋಗಿದೆ. ಇದೇ ಹೊತ್ತಿನಲ್ಲಿ ಇವರ ಮನೆಯ ದನ ಕರು ಹಾಕಿದ್ದು , ಸಿಡಿಲಿನ ಅಘಾತಕ್ಕೆ ಕರು ಅಸ್ವಸ್ಥ ಗೊಂಡಿದೆ. ಸದ್ಯ ಕರು ಮಲಗಿದ ಸ್ಥಿತಿಯಲ್ಲಿದೆ. ಗ್ರಾಮಕರಣಿಕರು ಸ್ಥಳ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಳಿ,ಮಳೆ, ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಕೂಡ ಕೈ ಕೊಟ್ಟಿತ್ತು.

