ಬಂಟ್ವಾಳ:   ಬುಧವಾರ ಮಧ್ಯರಾತ್ರಿ   ತೆಂಗಿನ ಮರಕ್ಕೆ ಹಾಗೂ ಮನೆಯೊಂದಕ್ಕೆ  ಸಿಡಿಲು ಬಡಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಅಲಾಡಿ ಎಂಬಲ್ಲಿ ಸಂಭವಿಸಿದ್ದು, ಪರಿಣಾಮ ಮೂರು ತೆಂಗಿನ ಮರ ಸುಟ್ಟರೆ, ಮನೆ ಗೊಡೆ ಬಿರುಕು ಬಿಟ್ಟಿದೆ.

IMG-20190606-WA0003
ಸಜೀಪ ಮುನ್ನೂರು ಗ್ರಾಮದ ಅಲಾಡಿ ನಿವಾಸಿ ಭರತ್ ಕುಮಾರ್  ಎಂಬವರ ಮನೆಯ  ಎದುರಿನ ತೆಂಗಿನ ಮರಕ್ಕೆ ಬಡಿದ ಸಿಡಿಲು  ಬಳಿಕ ಮನೆಗೆ   ಬಡಿಯಿತು. ಪರಿಣಾಮ   ಮನೆಯೊಳಗೆ ಗೋಡೆ ಬಿರುಕು  ಬಿಟ್ಟರೆ, ಮನೆಯ ವಿದ್ಯುತ್ ವಯರ್ ಗಳು , ಸ್ವಿಚ್ ಬೋರ್ಡುಗಳು ಸುಟ್ಟು ಹೋಗಿವೆ. ಮನೆಯವರಿಗೆ ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ.

IMG-20190606-WA0015

ಹಾಗೆಯೇ    ಮೂರು ತೆಂಗಿನ    ಮರಗಳು ಕೂಡ ಕರಟಿ ಹೋಗಿದೆ. ಇದೇ ಹೊತ್ತಿನಲ್ಲಿ ಇವರ ಮನೆಯ ದನ ಕರು ಹಾಕಿದ್ದು , ಸಿಡಿಲಿನ ಅಘಾತಕ್ಕೆ ಕರು ಅಸ್ವಸ್ಥ ಗೊಂಡಿದೆ. ಸದ್ಯ  ಕರು ಮಲಗಿದ ಸ್ಥಿತಿಯಲ್ಲಿದೆ.   ಗ್ರಾಮಕರಣಿಕರು ಸ್ಥಳ ಕ್ಕೆ     ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಳಿ,ಮಳೆ, ಸಿಡಿಲಿನ  ಅಬ್ಬರಕ್ಕೆ ವಿದ್ಯುತ್  ಕೂಡ  ಕೈ ಕೊಟ್ಟಿತ್ತು.

IMG-20190606-WA0008

By suddi9

Leave a Reply

Your email address will not be published. Required fields are marked *