ಬಂಟ್ವಾಳ: ರಾ.ಹೆ.ಯ ತುಂಬೆ ಜಂಕ್ಷನ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು  ಬಂಟ್ವಾಳ   ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು  ಶನಿವಾರ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಿ.ಮೂಡ ಗ್ರಾಮದ ಪರ್ಲಿಯಾ ನಿವಾಸಿ ಅಮೀರ್ ಹಸೈನ್ (೪೫) ಬಂಧಿತ ಆರೋಪಿಯಾಗಿದ್ದಾನೆ.

IMG-20190713-WA0020 ಈತ ತುಂಬೆ ಜಂಕ್ಷನ್ ಬಳಿ ಕೈಯಲ್ಲಿ ಚೀಲ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ಬಗ್ಗೆ ದೊರೆತ  ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್. ಐ.  ಪ್ರಸನ್ನ   ಮತ್ತವರ ಸಿಬಂದಿಗಳು ಕಾರ್ಯಾಚರಣೆ ನಡೆಸಿ  ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸುಮಾರು1 ಕೆ,ಜಿ 330 ಗ್ರಾಂ ಗಾಂಜಾ ಪತ್ತೆಯಾಗಿದೆ. ತಕ್ಷಣ ಈತನನ್ನು ಬಂಧಿಸಿ ಅತನ ಕೈಯಲ್ಲಿದ್ದ ಗಾಂಜಾವನ್ನು ವಶಪಡಿಸಲಾಗಿದೆ.ಈ ಮಾದಕವಸ್ತುವಿನ ಒಟ್ಟು ಮೌಲ್ಯ   39,000 ರೂ.  ಎಂದು ಅಂದಾಜಿಸಲಾಗಿದೆ. ಆರೋಪಿ ಈ ಮಾದಕ ವಸ್ತುವನ್ನು  ಮಂಗಳೂರು ಮೂಡುಶೆಡ್ಡೆಯ ಒರ್ವ ವ್ಯಕ್ತಿಯಿಂದ ಪಡೆದಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.   ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ.

By suddi9

Leave a Reply

Your email address will not be published. Required fields are marked *