ಬಂಟ್ಚಾಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕಿನ ವತಿಯಿಂದ ಧರ್ಮಸ್ಥಳದ ಭಗವಾನ್ ಬಾಹುಬಲಿಯ ಮಹಾಮಸ್ತಭಿಷೇಕ ಸ್ಮರಣಾರ್ಥ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ ಜನಮಂಗಲ ಯೋಜನೆಯಡಿ ಯೋಜನೆಯ ಸ್ವಸಹಾಯ ಸಂಘದ ಸಾಲದ ಮುಖಾಂತರ ಆಟೋರಿಕ್ಷಾ ಖರೀದಿಸಿ ಸದಸ್ಯರಿಗೆ ಸಾಲ ಮೊತ್ತದ ಶೇಕಡಾ ೫% ವಿಶೇಷ ಅನುದಾನವನ್ನು ಶುಕ್ರವಾರ ಬಂಟ್ವಾಳ ಯೋಜನಾ ಕಛೇರಿಯಲ್ಲಿ ವಿತರಣೆ ಮಾಡಲಾಯಿತು.

1 - Copy (1)
ಬಂಟ್ವಾಳ ತಾಲೂಕಿನ ೫ ಮಂದಿ ಫಲಾನುಭವಿಗಳಿಗೆ ಒಟ್ಟುರೂ. ೪೩೫೦೦/- ಮೊತ್ತದ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ್ ಪಿ ವಿತರಿಸಿದರು, ಈ ಸಂದರ್ಭ ಬಂಟ್ವಾಳ ತಾಲೂಕಿನಮೇಲ್ವಿಚಾರಕರಾದ ಕೇಶವ ಕೆ, ಅಶ್ವಿನಿ ಜಿ, ಅಮಿತಾ, ಹರಿಣಾಕ್ಷಿ, ಅಮಿತಾ, ಕೃಷಿ ಮೇಲ್ವಿಚಾರಕಜನಾರ್ಧನ, ಜೆ.ವಿ.ಕೆ ಸಮನ್ವಯಾಧಿಕಾರಿ ಸಪ್ನಾ, ಸಹಾಯಕ ಪ್ರಬಂಧಕರಾದ ದಿವ್ಯಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *