ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಬಡಕಬೈಲ್ ಮಂಗಾಜೆಯ ತಿರುವು ರಸ್ತೆಯಲ್ಲಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ಸೆ.24ರಂದು ಬುಧವಾರ ಬೆಳಗ್ಗೆ ನಡೆದಿದೆ.

ಟಿಪ್ಪರ್ ಚಾಲಕ ವೇಗವಾಗಿ ಬಿಸಿರೋಡ್ ಕಡೆಯಿಂದ ಮರಳು ಸಾಗಾಟ ಮಾಡಿ ಬರುತ್ತಿದ್ದ ವೇಳೆ ಮಂಗಾಜೆಯ ಸಮೀಪ ಬರುತ್ತಿದ್ದಂತೆ ಹೇಜಮಾಡಿಯಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಸ್ವಿಪ್ಟ್ ಕಾರು ಮಂಗಾಜೆ ತಿರುವು ರಸ್ತೆಗೆ ಬರುತ್ತಿದ್ದಂತೆ ಎದುರಿನಿಂದ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಟ್ಯರ್ ಪಂಕ್ಚರ್ ಆಗಿದೆ. ಬಂಟ್ವಾಳ ಠಾಣೆಗೆ ಟಿಪ್ಪರ್ ಚಾಲಕ ಹಾಗೂ ಕಾರಿನ ಡ್ರವ್ಯರ್ ದೂರು ದಾಖಲಿಸಲು ಮುಂದಾಗಿದ್ದಾರೆ.


