ಕುಪ್ಪೆಪದವು : ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸತ್ಯವಂತರಾಗಿದ್ದು, ನಿಯತ್ತಿನಿಂದ ಕೆಲಸ ಮಾಡುವವರು. ಯಾವುದೇ ಕಲಹ, ತಕರಾರುಗಳಿಗೆ ಸಿಲುಕುವುದಿಲ್ಲ. ಬ್ರಿಟಿಷರ ಕಾಲದಲ್ಲಿಯೇ ಈ ಜನಾಂಗಕ್ಕೆ ಆದಿ ದ್ರಾವಿಡ ಎಂಬ ಹೆಸರು ಇತ್ತು. ಪ್ರಸ್ತುತ ಪುತ್ತೂರು, ವಿಟ್ಲ, ಸುಳ್ಯ ಸೇರಿ 43 ಸಾವಿರಕ್ಕಿಂತಲೂ ಹೆಚ್ಚು ಆದಿದ್ರಾವಿಡರಿದ್ದು, ಸಂಘಟಿತರಾಗುವ ಆಗತ್ಯವಿದೆ ಎಂದರು. ನಮ್ಮ ಹಿರಿಯರು ತೀರ ಬಡತನದ ಕಾಲದಲ್ಲಿ ಬಳಸುತ್ತಿದ್ದ ಸೊಪ್ಪು-ಸೌದೆಗಳನ್ನು ಈಗಿನ ಕಾಲದಲ್ಲಿ ಆಟಿಡೊಂಜಿ ದಿನ ಆಚರಿಸಿಕೊಂಡು ತಿನ್ನುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ಇದರ ಆಧ್ಯಕ್ಷ ಶಿವಾನಂದ ಬಳ್ಳಾಲ್‍ಬಾಗ್ ಹೇಳಿದರು.7vpatidanempu

 

ಅವರು ಶ್ರೀ ಸತ್ಯಸಾರಮಾನಿ ದೈವ ಸೇವಾ ಸಮಿತಿ, ಡಾ. ಆಂಬೇಡ್ಕರ್ ಸಮಾಜ ಸೇವಾ ಸಂಘ(ರಿ) ಬಳ್ಳಾಜೆ ಕೊಳವೂರು ಕುಪ್ಪೆಪದವು ಇದರ ಅಶ್ರಯದಲ್ಲಿ ಬಳ್ಳಾಜೆ ಆಂಬೇಡ್ಕರ್ ಭವನದ ಕಾನದ ಕೂಟದ ಕಲಾ ಚಾವಡಿಯಲ್ಲಿ ಅಟಿದ ನೆಂಪು ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಎಡಪದವು ವಿಎಸ್‍ಎಸ್ ಬ್ಯಾಂಕ್‍ನ ಆಧ್ಯಕ್ಷ ನೀಲಯ್ಯ ಎಂ. ಆಗರಿ ಕಾರ್ಯಕ್ರಮವನ್ನು ತೆಂಗಿನ ಸಿರಿ ಆರಳಿಸುವ ಮೂಲಕ ಉದ್ಘಾಟಿಸಿದರು. ಸತ್ಯ ಸಾರಮಾನಿ ದೇವ ಸೇವಾ ಸಮಿತಿ ಬಳ್ಳಾಜೆ ಇದರ ಆಧ್ಯಕ್ಷ ಗಂಗಾಧರ್ ಕೆ. ಆಧ್ಯಕ್ಷತೆ ವಹಿಸಿದ್ದರು. ಆರ್ಚಕ ಐತಪ್ಪ ಬಳ್ಳಾಜೆ, ತಾಪಂ ಸದಸ್ಯ ನಾಗೇಶ್ ಶೆಟ್ಟಿ, ಮುತ್ತೂರು ಪಂ. ಸದಸ್ಯ ಪ್ರವೀಣ್ ಆಳ್ವ, ಆಂಬೇಡ್ಕರ್ ಸಮಾಜ ಸೇವ ಸ.ರಿ ಇದರ ಆಧ್ಯಕ್ಷ ರವಿ ಆಟ್ಟೆಪದವು , ಸತೀಶ್ ಬಳ್ಳಾಜೆ ಸೇರಿ ಹಲವು ಉಪಸ್ಥಿತರಿದ್ದರು. ಆಶಾಲತ ಆಟ್ಟೆಪದವು ನಿರೂಪಿಸಿದರು.

ಕಾರ್ಯಕ್ರಮದ ವೇಳೆ ಆಂಬೇಡ್ಕರ್ ಪ್ರತಿಮೆಗೆ ಹೂ ಮಾಲೆ ಹಾಕಿ ಗೌರವಿಸಲಾಯಿತು. ತುಳುನಾಡಿನ ಗ್ರಾಮೀಣ ಕ್ರೀಡೆಗಳನ್ನು ಆಡಲಾಯಿತು. ಆಟಿದ ಭೋಜನ ಕೂಟದಲ್ಲಿ ಭೋಜನ ಆಯೋಜಿಸಲಾಗಿತ್ತು.

By suddi9

Leave a Reply

Your email address will not be published. Required fields are marked *