ಕೈಕಂಬ : ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಗಾಳಿ-ಮಳೆ, ಮತ್ತೊಂದೆಡೆ ಫಲ್ಗುಣಿ ನದಿಯಲ್ಲಿ ಏರರುತ್ತಿರುವ ಪ್ರವಾಹದಿಂದ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ತಗ್ಗುಪ್ರದೇಶಗಳಲ್ಲಿ ಜನರು ಮತ್ತು ಜಾನುವಾರು ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ಮುಂದುವರಿದಿದೆ.IMG_20190810_091816

ಗುರುಪುರ, ಉಳಾಯಿಬೆಟ್ಟು, ದೋಣಿಂಜೆ, ಬೈಲುಪೇಟೆ, ಅಡ್ಡೂರು, ಪೊಳಲಿ, ಮಳಲಿ, ಪೆರ್ಮಂಕಿ, ಅದ್ಯಪಾಡಿ ಕುದ್ರು, ನೂಯಿ ಕೆಳಗಿನಕೆರೆ ಮೊದಲಾದೆಡೆ ಕಾಣಿಸಿಕೊಂಡಿರುವ ಪ್ರವಾಹಕ್ಕೆ ಜನರು ಭಯಭೀತರಗಿದ್ದಾರೆ.gur-aug-10-adyapadi kudru

ಅದ್ಯಪಾಡಿ : ಮನೆಗಳು ಜಲಾವೃತ

ಫಲ್ಗುಣಿ ನದಿಗೆ ಹತ್ತಿರದ ಗ್ರಾಮ ಅದ್ಯಪಾಡಿಯಲ್ಲಿ ಎಲ್ಲೆಡೆ ಪ್ರವಾಹ ವ್ಯಾಪಿಸಿದೆ. ಜನವಸತಿ ಪ್ರದೇಶವಾದ ಇಲ್ಲಿ ಮೊಗರು ಕುದ್ರು ಅಕ್ಷರಶಃ ದ್ವೀಪ ಪ್ರದೇಶದಂತಾಗಿದೆ. ಇಲ್ಲಿರುವ 12-15 ಮನೆ ಈಗಾಗಲೇ ಜಲಾವ್ರತಗೊಂಡಿದ್ದು, ಸ್ಥಳೀಯರು ಸಂತ್ರಸ್ತರನ್ನು ದೋಣಿಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ. ಇಲ್ಲಿ ಜೀವನ್, ಜೋಸೆಫ್ ಹಾಗೂ ಇತರ ನಾಲ್ಕೈದು ಯುವಕರು ದೋಣಿಗಳೊಂದಿಗೆ ಸತತ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಉಳಿಯಲ್ಲಿದ್ದ ಯತೀನ್ ಎಂಬವರಿಗೆ ಸೇರಿದ ಸುಮಾರು 30ರಷ್ಟು ಜಾನುವಾರು ಇದ್ದು, ಅವುಗಳಲ್ಲಿ ಕೆಲವು ದನ ಹಾಗೂ ಕೂಲಿ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒಂದಷ್ಟು ದನಗಳಿಗೆ ಅಲ್ಲೇ ಆಹಾರ ವ್ಯವಸ್ಥೆ ಮಾಡಲಾಗಿದೆ. ಫಲ್ಗುಣಿ ನದಿಯಲ್ಲಿ ದೋಣಿ ಬಳಸಿಕೊಂಡು ರುಕ್ಷ್ಮಯರು ತನ್ನ ದನಗಳನ್ನು ನದಿ ದಂಡೆಗೆ ಸಾಗಿಸಿದರು.

ಗುರುಪುರ ಆಸುಪಾಸು…

ಗುರುಪುರದ ಕುಕ್ಕುದಕಟ್ಟೆ ಹಾಗೂ ಪರಾರಿ ಭಾಗದಲ್ಲಿ ಪ್ರವಾಹದ ಮಟ್ಟ ರಾಷ್ಟ್ರೀಯ ಹೆದ್ದಾರಿಗೆ(169) ಬೀಳುವ ಹಂತ ತಲುಪಿದ್ದು, ಇದೇ ರೀತಿ ನೀರು ಏರಿಕೆಯಾದರೆ ಮಂಗಳೂರು-ಮೂಡಬಿದ್ರೆ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಉಳಾಯಿಬೆಟ್ಟಿನಲ್ಲಿ ಫಲ್ಗುಣಿ ನದಿ ಪ್ರವಾಹ ಒಳ ರಸ್ತೆಗೆ ಬಿದ್ದಿದ್ದು, ರಸ್ತೆ ಸಂಚಾರ ಕಡಿದು ಹೋಗಿದೆ. ಇಲ್ಲಿನ ಕೆಲವು ಮನೆಯವರು ಬೇರೆಡೆಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ದೋಣಿಂಜೆ, ಬೈಲುಪೇಟೆಯಲ್ಲೂ ಪ್ರವಾಹ ಹೆಚ್ಚಾಗಿದೆ. ಇಲ್ಲಿಗೆ ಅಧಿಕಾರಿ ತಂಡ ಹಾಗೂ ರಕ್ಷಣಾ ಪಡೆಯ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸಿದೆ. ನದಿ ತಟದಲ್ಲಿರುವ ಮನೆಯವರು ನೀರಿನ ಮಟ್ಟ ಏರಿಕೆ ಮೇಲೆ ನಿಗಾ ಇರಿಸುವಂತೆ ಹಾಗೂ ಎಚ್ಚರದಲ್ಲಿರುವಂತೆ ಸೂಚಿಸಿದ್ದಾರೆ.

gur-aug-10-dana rescue-1

ಕುದ್ರುವಿನಲ್ಲಿ ಶಿವರಾಮ ಮೂಲ್ಯ, ಪದ್ಮನಾಭ ಮೂಲ್ಯ, ಶೀನ ಕಾವ, ಮಹಾಬಲ ಮೂಲ್ಯ, ಡೆನ್ನಿಸ್ ಡಿ’ಸೋಜ, ಈಸನ್ ಡಿ’ಸೋಜ, ಸುರೇಶ್ ಮಸ್ಕರೇನಸ್, ಮೌರಿಸ್, ಇಲ್ಯಾಸ್, ಐರಿಸ್, ರೋಹಿಸ್, ಮ್ಯಾಕ್ಸಿ ಮೊದಲಾದವರ ಮನೆಗಳು ಬಹುತೇಕ ಮುಳುಗಡೆಯಾಗಿದೆ.

gur-aug-10-tp eo sadananda sapaliga

ಇಲ್ಲಿ ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ತಾಪಂ ಮುಖ್ಯ ಇಒ ಸದಾನಂದ ಸಫಲಿಗ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ವೀಎ ಯಮುನಪ್ಪ, ಅದ್ಯಪಾಡಿ ರೈತರ ಹಿತರಕ್ಷಣಾ ವೇದಿಕೆ ಸಂಚಾಲಕ ರೂಪೇಶ್ ಕುಮಾರ್ ಅದ್ಯಪಾಡಿ, ತಾಪಂ ಸದಸ್ಯ ವಿಶ್ವನಾಥ ಶೆಟ್ಟಿ ಮೊದಲಾದವರು ಕುದ್ರುವಿನ ಮನೆಗಳಿಗೆ ದೋಣಿಗಳಲ್ಲಿ ತೆರಳಿ, ಮನೆಮಂದಿಯಲ್ಲಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಜಿಲ್ಲಾಡಳಿದಿಂದ ಮೋಟಾರ್ ಬೋಟುಗಳ ವ್ಯವಸ್ಥೆಯ ಭರವಸೆ ನೀಡಿದ್ದಾರೆ.

ಅಡ್ಡೂರು ಉಳಿಯ

ಪೂರ್ಣ ಮುಳುಗಡೆ :

ಗುರುಪುರ ಗ್ರಾಪಂ ವ್ಯಾಪ್ತಿಯ ಅಡ್ಡೂರಿನಲ್ಲಿ ಪ್ರವಾಹ ಪ್ರಕೋಪ ತೀವ್ರಗೊಂಡಿದ್ದು, ಇಲ್ಲಿನ ಉಳಿಯ ಮತ್ತು ಕೆಳಗಿನಕೆರೆ ಪ್ರವಾಹದಿಂದ ನಡುಗಡ್ಡೆಯಂತಾಗಿದೆ. ಇಲ್ಲಿನ ಕೆಲವು ಮನೆಗಳು ಜಲಾವ್ರತವಾಗಿದ್ದು, ಜನರು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸ್ಥಳೀಯ ಈಜುಗಾರರು ತಮ್ಮ ದೋಣಿಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. ಇಲ್ಲಿನ ರಸ್ತೆ ಸಂಪರ್ಕ ಕಡಿದು ಹೋಗಿದೆ.10vpuliya

DSC_0288

ಅಡ್ಡೂರು ಪೊಳಲಿ ಬಾಬಪಕ್ರದ್ಧೀನ್ ಜುಮ್ಮಾ ಮಸಿದಿಯ ರಸ್ಥೆಗೆ ನೀರು ತುಂಬಿದೆ. ಭಾಗದಲ್ಲಿ ಚೇರ ಎಂಬಲ್ಲಿ ಕೋಳಿಫಾರಂ ಒಂದಕ್ಕೆ ನೀರು ನುಗ್ಗಿದೆ. ಉಳಿಯ ಕುದ್ರು ಭಾಗದಲ್ಲಿ ಸುಮಾರು 5ಮನೆಗಳಿಗೆ ನೀರು ಬಂದಿದ್ದು ಅಲ್ಲಿಯ ಸುಮಾರು 20ಜಾನುವಾರು ,ಕುರಿ,ಆಡುಗಳನ್ನು ಭೋಟು ಮುಖಾಂತರ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಮಳಲಿ ಕಾಜಿಲದಿಂದ ಕಡೆಯಿಂದ ಬರುವ ರಸ್ಥೆಯು ನೀರಿನಿಂದೆ ಮುಳುಗಡೆಯಾಗಿದೆ.

10vpcherakolifarm 10vppalguninadi1

ನಾಲ್ಕೂ ಸುತ್ತಲು ಫಲ್ಗುಣಿ ನದಿ ಹರಿಯುತ್ತಿರುವ ಉಳಿಯ(ದ್ವೀಪ ಪ್ರದೇಶ) ಎಂಬಲ್ಲಿ ಹೈನುಗಾರಿಕೆಯ ದನ, ಕುರಿಗಳು ಹಾಗೂ ಕೂಲಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದು, ಶನಿವಾರ ಬೆಳಿಗ್ಗಿಂದಲೇ ದೋಣಿಗಳಲ್ಲಿ ರಕ್ಷಿಸುವ ಕಾರ್ಯ ನಡೆದಿದೆ. ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡಿದ್ದಾರೆ. ಈ ಪ್ರದೇಶದಲ್ಲಿ ಗುರುಪುರ ಗ್ರಾಪಂ ಪಿಡಿಒ ಅಬೂಬಕ್ಕರ್, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಗ್ರಾಪಂ ಸದಸ್ಯರಾದ ಯಶವಂತ ಶೆಟ್ಟಿ, ವಿಜಯಲಕ್ಷ್ಮೀ ಹಾಗೂ ಇತರರು ಮೊಕ್ಕಾಂ ಹೂಡಿದ್ದಾರೆ.

ಗುರುಪುರ ಆಸುಪಾಸಿನಲ್ಲಿ ಅಲ್ಲಲ್ಲಿ ಗುಡ್ಡೆ ಕುಸಿತ ನಡೆದಿದ್ದು, ಮರಗಳು ಬಿದ್ದಿವೆ. ಮೆಸ್ಕಾಂ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕಕ್ಕೆ ತುರ್ತು ಕೆಲಸ ನಡೆಸುತ್ತಿದ್ದಾರೆ. ಕುದ್ರು ಭಾಗಕ್ಕೆ ಆಗಮಿಸಿದ ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚೇತನ್ ಹಾಗೂ ಅವರ ತಂಡ ಜನರಿಗೆ ಪ್ರಾಥಮಿಕ ಔಷಧಿ ಹಂಚಿದೆ.

ಅದ್ಯಪಾಡಿ ಕುದ್ರು ಭಾಗದಲ್ಲಿ ಈ ತೆರನಾದ ಪ್ರವಾಹ ವಿಕೋಪಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಮಳವೂರು ಕಿಂಡಿ ಅಣೆಕಟ್ಟು ಕಾರಣವಾಗಿದೆ. 20 ವರ್ಷಗಳ ಹಿಂದೆ ಇಲ್ಲಿ ಇಷ್ಟೊಂದು ಪ್ರವಾಹ ಇರಲಿಲ್ಲ. ಅಣೆಕಟ್ಟು ನಿರ್ಮಿಸಿದ ಬಳಿಕ ಈ ಸಮಸ್ಯೆ ಉಂಟಾಗಿದೆ. ಕಿಂಡಿಗಳು ಕಡಿಮೆಯಾಗಿ, ಕಂಬಗಳು ಹೆಚ್ಚಾಗಿವೆ. ಪರಿಣಾಮ, ಪ್ರವಾಹ ಸಂದರ್ಭದಲ್ಲಿ ನದಿಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಕೆಳಗಡೆ ಹರಿದು ಹೋಗುವುದಿಲ್ಲ ಎಂದು ಕುದ್ರು ನಿವಾಸಿ ಅಪ್ಪಿ ಮೂಲ್ಯ ಹಾಗೂ ಜೀವನ್ ಮಲ್ಲಿ, ಜೋಸೆಫ್ ದೂರಿದರು.

By suddi9

Leave a Reply

Your email address will not be published. Required fields are marked *