ಬಂಟ್ವಾಳ ; ಸಜಿಪಮೂಡ ಗ್ರಾಮದ ಸುಭಾಷ್ ನಗರದ ಶುಭಾಷ್ ಯುವಕ ಮಂಡಲ( ರಿ)ದ ಆಶ್ರಯದಲ್ಲಿ 93 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಅಕ್ಟೋಬರ್ 5 ರಿಂದ 7 ರವರೆಗೆ ನಡೆಯುವ ಹಿನ್ನಲೆಯಲ್ಲಿ ಸಮಾಲೋಚನಾ ಸಭೆಯು ಸುಭಾಸ್ ನಗರ ದ .ಕ .ಜಿ .ಪ .ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು. ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ದ ಕ ಜಿ ಪ.ಮಾಜಿ ಅಧ್ಯಕ್ಷ ಬಿ. ಸದಾನಂದ ಪೂಂಜಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಎನ್ ಸುಬ್ರಹ್ಮಣ್ಯ ಭಟ್, ಸಂಘದ ಗೌರವಾಧ್ಯಕ್ಷ ಕೆ ಸದಾನಂದ ಶೆಟ್ಟಿ ,ಯುವಕ ಮಂಡಲದ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ ,ಶಾರದಾ ಪೂಜೆ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಹ್ಲಾದ ,ಸಜೀಪಮೂಡ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಬಿ. ಶೋಬಿತ್ ಪೂಂಜಾ ಮೊದಲಾದವರು ಉಪಸ್ಥಿತರಿದ್ದರು.ಸಭೆಯಲ್ಲಿ ಶ್ರೀ ಶಾರದ ಮಹೋತ್ಸವವನ್ನು ಸಾಂಸ್ಕೃತಿಕ,ಧಾರ್ಮಿಕ ಸಭಾ ಕಾರ್ಯ ಕ್ರಮದೊಂದಿಗೆ ವಿಜೃಂಭಣೆಯಲ್ಲಿ ಆಚರಿಸಲು ನಿರ್ಧರಿಸಲಾಯಿತು.
