ಕೈಕಂಬ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರುಕುಡಿಕೆ ಸಂದರ್ಭದಲ್ಲಿ ಕೇರಳದ ಗುರುವಾಯೂರುವಿನಲ್ಲಿ ನಡೆದ ನೃತ್ಯ ಪ್ರದರ್ಶನವನ್ನು ಅವಹೇಳನ ಮಾಡಿ ಮದ್ಯದ ಬಾಟಲಿಯೊಂದಿಗೆ ನೃತ್ಯ ಮಾಡಿದ ಟಿಕ್ ಟಾಕ್ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಗುರುಪುರ ಪ್ರಖಂಡದ ವತಿಯಿಂದ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ಗುರುಪುರ ಪ್ರಖಂಡ ಸಂಚಾಲಕ ಹರೀಶ್ ಮಟ್ಟಿ, ಸಹ ಸಂಚಾಲಕ ಸುದರ್ಶನ, ಮದ್ವರಾಜ್ ಕೈಕಂಬ ಮತ್ತಿತರರು ಉಪಸ್ಥಿತರಿದ್ದರು.