ಕೈಕಂಬ:ಕಂದಾವರ, ಅದ್ಯಪಾಡಿ ಮತ್ತು ಕೊಳಂಬೆ ಗ್ರಾಮಗಳನ್ನೊಳಗೊಂಡ ಕಂದಾವರ ಗ್ರಾಮ ಪಂಚಾಯತ್‍ನಲ್ಲಿ ಸೋಮವಾರ 2019-20ನೇ ಸಾಲಿನ `ಜಲಶಕ್ತಿ-ಜಲಾಮೃತ ಅಭಿಯಾನ’ ವಿಶೇಷ ಗ್ರಾಮಸಭೆ ಜರುಗಿತು.
ಪಂಚಾಯತ್ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು.
ಸಭೆಯಲ್ಲಿ ಕೆರೆ ಅಭಿವೃದ್ಧಿ, ಕಿಂಡಿ ಅಣೆಕಟ್ಟು ನಿರ್ಮಾಣ-ನಿರ್ವಹಣೆ, ಕೆರೆ ಹೂಳೆತ್ತುವಿಕೆ, ಬಾವಿ ಪುನರುಜ್ಜೀವನ, ತಡೆಗೋಡೆ ರಚನೆ ಹಾಗೂ ಕೃಷಿ ಇಲಾಖೆಯಿಂದ ಸಸಿ ನೆಡುವಿಕೆ, ನೀರು ಹರಿಯುವ ತೋಡುಗಳ ರಚನೆ, ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲಾಯಿತು.
