ಕೈಕಂಬ:ಕುಪ್ಪೆಪದವು ವಿಷ ಪೂರಿತ ಹಾವು ಕಚ್ಚಿದ ಪರಿಣಾಮ ಮಹಿಳೆಯೊರ್ವರು ಮೃತಪಟ್ಟ ಘಟನೆ ಕುಪ್ಪೆಪದವು ಸಮೀಪದ ಅಚಾರಿಚೋರ ಎರ್ಮಾಳ ಎಂಬಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ನಿವಾಸಿ ಮಾಧವ ಎಂಬವರ ಪತ್ನಿ ಬೇಬಿ(35) ಮೃತಪಟ್ಟ ದುರ್ದೈವಿ.
ಮೃತರು ಮನೆಯ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪೊದೆಯಲ್ಲಿದ್ದ ವಿಷಕಾರಿ ಹಾವು ಕಚ್ಚಿದ್ದು ವಿಷಯ ತಿಳಿದ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ದಾರಿಮದ್ಯೆ ಬೇಬಿ ಕೊನೆಯುಸಿರೆಳೆದಿದ್ದಾರೆ. ಮೃತರು ಗಂಡ ಮತ್ತು ಎಳೆಯ ಪ್ರಾಯದ ಓರ್ವ ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.