ಗುರುಪುರ : ಶ್ರೀ ವೈದ್ಯನಾಥೇಶ್ವರ ಜಯಂತಿ ನಿಮಿತ್ತ ಗುರುಪುರದ ಗೋಳಿದಡಿಗುತ್ತಿನಲ್ಲಿ ಸೆ. 14ರಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರಿಗೆ ಅದ್ದೂರಿ `ತ್ರಿಕಾಲ ಪೂಜೆ’ ಜರುಗಿತು.
ಸೆ. 13ರಂದು ರಾತ್ರಿ ಗೋಳಿದಡಿಗುತ್ತಿಗೆ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವರ ಆಗಮನವಾಗಿದ್ದು, ಸೆ. 14ರಂದು ಬೆಳಿಗ್ಗೆ ವೇದೋಕ್ತ ಪೂಜೆ, ಕಲ್ಪೋಕ್ತ ಪೂಜೆ, ವಟು ಆರಾಧನೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ತದನಂತರ 2ರಿಂದ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ `ಲೀಲಾ ಮಾನುಷ ವಿಗ್ರಹ’ ತಾಳಮದ್ದಳೆ ಸಾದರಗೊಂಡಿತು.
ಪಾವಂಜೆ ಸುಬ್ರಹ್ಮಣ್ಯ ದೇವರ ಅರ್ಚಕರ ಪೌರೋಹಿತ್ಯದಲ್ಲಿ ನಡೆದ ಲೋಕಕಲ್ಯಾಣ ಇಷ್ಟಾರ್ಥ ಸಿದ್ಧಿ ಪೂಜೆಯಲ್ಲಿ ಗೋಡಿಗಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಹಾಗೂ ಮಕ್ಕಳು ಕುಳಿತ್ತಿದ್ದರು.

