ಕಾಂತಾವರ : ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ವಿಶ್ವಕರ್ಮ ಪೂಜೆಯು ಪೂರೋಹಿತ್ ದಿನೇಶ್ ಆಚಾರ್ಯರ ಆಚಾರ್ಯತ್ವದಲ್ಲಿ ನಡೆಯಿತು.
ಬಳಿಕ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಂಗಳೂರು ಶ್ರೀಕಾಳಿಕಾಂಬಾ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಬಿ.ಉದಯ ಆಚಾರ್ಯ , ಮೂಡಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರರಾದ ಶ್ರೀ ಶಿವರಾಮ ಆಚಾರ್ಯ ಉಳಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಯತೀಶ ಆಚಾರ್ಯ ಬೇಲಾಡಿ ವಹಿಸಿದರು. ಸಂಘ ಸ್ಥಾಪನೆಗೆ ಶ್ರಮಸಿದ ಬೇಲಾಡಿ ಪುಟ್ಟಣ್ಣ ಆಚಾರ್ಯ ಹಾಗೂ ಕೆ.ರಾಮಯ್ಯ ಆಚಾರ್ಯ ಕುಂದಿಲ ಇವರ ಭಾವಚಿತ್ರ ಅನಾವರಣಗೊಳಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ರೀ ಶ್ಯಾಮರಾಯ ಆಚಾರ್ಯ ಮೈಂತೂರು ಇವರನ್ನು ಸನ್ಮಾನಿಸಲಾಯಿತು.ಪ್ರಭಾಕರ ಆಚಾರ್ಯ ಮೈಂತೂರು ಸ್ವಾಗತಿಸಿದರು , ಹರೀಶ ಆಚಾರ್ಯ ಬೇಲಾಡಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.


