ಕೋಲಾರ : ಸೆಪ್ಟೆಂಬರ್ 16 ರಂದು ನಡೆದ ಬಿ.ಎಸ್.ಎನ್.ಎಲ್. ನೌಕರರ ಸದಸ್ಯತ್ವ ಪರಿಶೀಲನೆಗಾಗಿ ನಡೆದ ಚುನಾವಣಾ ಫಲಿತಾಂಶ ಸೆಪ್ಟೆಂಬರ್ 18 ರಂದು ಪ್ರಕಟಗೊಂಡಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾ|| ಎ.ಸಿ. ಕೃಷ್ಣಾರೆಡ್ಡಿ ನೇತೃವದ ಎನ್.ಎಫ್.ಟಿ.ಇ. ಬಿ.ಎಸ್.ಎನ್.ಎಲ್. ಸಂಘಟನೆ ಸತತ 8ನೇ ಬಾರಿಗೆ ಪ್ರಚಂಡ ಜಯ ಗಳಿಸಿರುತ್ತದೆ.

BSNL EMPLOYEES ASSOCIATION1

ಕಾ|| ಎ.ಸಿ.ಕೃಷ್ಣಾರೆಡ್ಡಿ ಯವರು ಈ ಪ್ರಚಂಡ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಸತತ 8ನೇ ಬಾರಿ ಗೆಲುವು ದೊರಕಿಸಿಕೊಟ್ಟಂತ ಎಲ್ಲಾ ಕೋಲಾರ ಮತ್ತು ಚಿಕ್ಕಬಳ್ಳಾಪುರ ನೌಕರರಿಗೆ ಧನ್ಯವಾದ ತಿಳಿಸಿದ್ದಾರೆ ಮತ್ತು ಈ ಗೆಲುವಿಗೆ ಸಹಕರಿಸಿದ ಕಾ|| ಟಿ.ವಿ. ಚಲಪತಿ, ಜಿಲ್ಲಾ ಕಾರ್ಯಕಾರಿ ಸದಸ್ಯರು, ಶಾಖಾ ಕಾರ್ಯದರ್ಶಿಗಳು ಮತ್ತು ಎಲ್ಲಾ ಬಿ.ಎಸ್.ಎನ್.ಎಲ್. ನೌಕರರಿಗೆ ಎನ್.ಎಫ್.ಟಿ.ಇ. ಬಿ.ಎಸ್.ಎನ್.ಎಲ್. ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಕಾರ್ಯದರ್ಶಿ ಎ.ಸಿ.ಕೃಷ್ಣಾರೆಡ್ಡಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *