ಶ್ರೀನಿವಾಸಪುರ: ಪಟ್ಟಣದ ಹೊರ ವಲಯದ ರೈಲು ನಿಲ್ದಾಣಕ್ಕೆ ವಿಶೇಷ ರೈಲಿನಲ್ಲಿ ಆಗಮಿಸಿದ ರೈಲ್ವೆ ವಿಭಾಗೀಯ ವ್ಯಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಬೇಕು. ಭದ್ರತೆಗೆ ಆದ್ಯತೆ ನೀಡಬೇಕು. ಅಂಡರ್‌ ಪಾಸ್‌ಗಳನ್ನು ದುರಸ್ತಿ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಶ್ರೀನಿವಾಸಪುರದಿಂದ ತಿರುಪತಿಗೆ ರೈಲು ಮಾರ್ಗ ಹಾಕಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
 16svp2ep
ಲೋಕಸಭಾ ಸದಸ್ಯ ಎಸ್‌.ಮುನಿಸ್ವಾಮಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೈಲ್ವೆಯಲ್ಲಿನ ಕುಂದು ಕೊರತೆಗಳನ್ನು ವಿಭಾಗೀಯ ವ್ಯವ್ಥಾಪಕರ ಗಮನಕ್ಕೆ ತರಲಾಗಿದೆ ಹೇಳಿದರು. ತಾಲ್ಲೂಕು ಬಿಜೆಪಿ ಮುಖಂಡರಾದ ಡಾ. ಕೆ.ಎನ್‌.ವೇಣುಗೋಪಾಲ್‌, ವೆಂಕಟೇಗೌಡ, ಇ.ಶಿವಣ್ಣ, ನಾರಾಯಣಸ್ವಾಮಿ, ರೆಡ್ಡಪ್ಪ, ಶಫಿವುಲ್ಲಾ, ಸುನಿಲ್‌, ಎಂ.ಎನ್‌.ಕೆ.ನಾಗರಾಜ್‌ ಇದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By suddi9

Leave a Reply

Your email address will not be published. Required fields are marked *