ಫರಂಗಿಪೇಟೆ : ತುಂಬೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೋಮಪ್ಪ ಕೋಟ್ಯಾನ್ ರವರ ಮನೆ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ . ಮನೆ ಮಂದಿ ಮನೆಯಲ್ಲಿ ಇಲ್ಲದ ಸಂದರ್ಭ ಸುಮಾರು 11:30 ಯಿಂದ ಮದ್ಯಾಹ್ನ 1:30 ನಡುವೆ ಈ ಕೃತ್ಯ ಮಾಡಲಾಗಿದೆ .

IMG_0088_resizeಮನೆಯ ಹಿಂದಿನ ಬಾಗಿಲಿನ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮುಂಬಾಗದ ಬಾಗಿಲನ್ನು ಒಳಗಿನಿಂದಲೇ ಭದ್ರ ಪಡಿಸಿ ಮನೆಯಲ್ಲಿರುವ 5 ಕಪಾಟುಗಳನ್ನು ತೆರೆದು   ಸುಮಾರು  50 ಪವನು ಗಳಷ್ಟು ಚಿನ್ನಾಭರಣ , ಸುಮಾರು 15000 ರೂಪಾಯಿ ನಗದು ಕಳವು ಮಾಡಿದ್ದಾರೆ ಎಂದು ಸೋಮಪ್ಪ ಕೋಟ್ಯಾನ್ ರವರು ದೂರು ನೀಡಿದ್ದಾರೆ.

IMG_0094_resize

 ಬಂಟ್ವಾಳ ವೃತ್ತ ನಿರೀಕ್ಷಕರಾದ ನಾಗರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ ಬೆರಳಚ್ಚು ತಜ್ಞರಾದ ಗೌರೀಶ್ ರವರ ತಂಡ ಸ್ಥಳದ್ದಲಿದ್ದು ಕಳ್ಳರ ಸುಳಿವು ಬಗ್ಗೆ ತನಿಖೆ ನಡೆಸುತ್ತಿದೆ
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ಕಳ್ಳತನ ದ  ಬಗ್ಗೆ ಮಾಹಿತಿ ತಿಳಿದು ಆಗಮಿಸಿದ್ದಾರೆ.

By suddi9

Leave a Reply

Your email address will not be published. Required fields are marked *