ಫರಂಗಿಪೇಟೆ : ತುಂಬೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೋಮಪ್ಪ ಕೋಟ್ಯಾನ್ ರವರ ಮನೆ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ . ಮನೆ ಮಂದಿ ಮನೆಯಲ್ಲಿ ಇಲ್ಲದ ಸಂದರ್ಭ ಸುಮಾರು 11:30 ಯಿಂದ ಮದ್ಯಾಹ್ನ 1:30 ನಡುವೆ ಈ ಕೃತ್ಯ ಮಾಡಲಾಗಿದೆ .
ಮನೆಯ ಹಿಂದಿನ ಬಾಗಿಲಿನ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮುಂಬಾಗದ ಬಾಗಿಲನ್ನು ಒಳಗಿನಿಂದಲೇ ಭದ್ರ ಪಡಿಸಿ ಮನೆಯಲ್ಲಿರುವ 5 ಕಪಾಟುಗಳನ್ನು ತೆರೆದು ಸುಮಾರು 50 ಪವನು ಗಳಷ್ಟು ಚಿನ್ನಾಭರಣ , ಸುಮಾರು 15000 ರೂಪಾಯಿ ನಗದು ಕಳವು ಮಾಡಿದ್ದಾರೆ ಎಂದು ಸೋಮಪ್ಪ ಕೋಟ್ಯಾನ್ ರವರು ದೂರು ನೀಡಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕರಾದ ನಾಗರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ ಬೆರಳಚ್ಚು ತಜ್ಞರಾದ ಗೌರೀಶ್ ರವರ ತಂಡ ಸ್ಥಳದ್ದಲಿದ್ದು ಕಳ್ಳರ ಸುಳಿವು ಬಗ್ಗೆ ತನಿಖೆ ನಡೆಸುತ್ತಿದೆ
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ಕಳ್ಳತನ ದ ಬಗ್ಗೆ ಮಾಹಿತಿ ತಿಳಿದು ಆಗಮಿಸಿದ್ದಾರೆ.
