ಮಂಗಳೂರು: ಸಮಾಜಕ್ಕೆ ಕಾಲಕಾಲಕ್ಕೆ ಬೇಕಾಗುವುದರ ಬಗ್ಗೆ ಹೊಸತನದ ಚಿಂತನೆ ನಡೆಸುವ ಮನೋಭಾವ ಎಂಜಿನಿಯರಿಂಗ್ ವಿದ್ಯಾರ್ಥಿಗಳದ್ದಾಗಬೇಕು. ಬರೇ ಅಂಕಗಳಿಕೆ, ಉದ್ಯೋಗ,ಸಂಪಾದನೆಗೆ ಎಂಜಿನಿಯರಿಂಗ್ ಸೀಮಿತವಾಗದೇ ಹರಿವ ನೀರಾಗಿ ಸಮಸ್ಯೆಗಳ ನಡುವೆ ಹಾದು ಹೋಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ, ಸಮರ್ಪಣಾ ಮನೋಭಾವದಿಂದ ತೊಡಗಿಕೊಳ್ಳುವ ಮಾನಸಿಕತೆ ನಮ್ಮ ವಿದ್ಯಾರ್ಥಿಗಳದ್ದಾಗಬೇಕು ಎಂದು ಖ್ಯಾತ ವಾಗ್ಮಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 19 CEC Soolibele

ಅವರು ಸಂಸ್ಥಾಪಕರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಮಂಗಳವಾರ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಿರುವುದರಿಂದಲೇ ಭಾರತ ಉಳಿದು ಬೆಳೆದಿದೆ. ಕರ್ನಾಟಕವೂ ತನ್ನ ಭಾಷೆಯ ಸಾಮಥ್ರ್ಯದಿಂದಲೇ ಗಮನ ಸೆಳೆದಿದ್ದು ಜೆಮ್‍ಶೆಡ್‍ಜೀ ಟಾಟಾರವರಂಥವರಿಗೆ ಭಾರತೀಯ ವಿಜ್ಞಾನ ಸಂಸ್ಥೆಯಂತಹ ದೊಡ್ಡ ಸಂಶೋಧನಾ ಸಂಸ್ಥೆಯನ್ನು ಇಲ್ಲಿ ತೆರೆಯಲು ಆಕರ್ಷಣೆಯಾಯಿತು. ಆಚಾರ್ಯ ಮಧ್ವ, ಶಂಕರ, ರಾಮಾನುಜರಂತಹ ದಾರ್ಶನಿಕರಿಗೂ ವೇದಿಕೆಯಾದ ಕರ್ನಾಟಕದಲ್ಲಿ ಕನ್ನಡಿಗರ ಅಧ್ಭುತ ಚಿಂತನೆಗಳ ಮೂಲಕ ಕನ್ನಡಿಗರು ಸಮಾಜೋಪಯಾಗಿ ಬೆಳೆಯಬೇಕು ಎಂದವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ಥಾಪಕರ ದಿನಾಚರಣೆಯ ಹಿನ್ನೆಲೆಯನ್ನು ವಿವರಿಸಿದರು. ಎನ್ನೆಸ್ನೆಸ್ ಘಟಕದ ನಾರಾಯಣ ಸ್ವಾಮಿ ಸಹಕರಿಸಿದರು. ವಿದ್ಯಾರ್ಥಿನಿಯರಾದ ರಕ್ಷಾ ಸ್ವಾಗತಿಸಿದರು. ಸಾಧನಾ ಅತಿಥಿಯವರನ್ನು ಪರಿಚಯಿಸಿದರು

By suddi9

Leave a Reply

Your email address will not be published. Required fields are marked *