ಕೈಕಂಬ: ಮಕ್ಕಳನ್ನು ತಿದ್ದಿ ತೀಡಿ, ಉತ್ತಮ ವ್ಯಕ್ತಿಯಾನ್ನಾಗಿ ಮಾಡುವ, ಗುರು ಸಮಾನರಾಗಿರುವ, ಶಿಕ್ಷರನ್ನು ಗೌರವದಿಂದ ಕಾಣುವುದು ಸಮಾಜದ ಕರ್ತವ್ಯ ಎಂದು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು. ಅವರು ನ.21ರಂದು ಗುರುವಾರ ನಡೆದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುತ್ತೂರು ಇದರ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷರಿಗೆ ಗೌರವದ ಸ್ಥಾನಮಾನ ನೀಡಿ ಗೌರವದಿಂದ ಕಾಣಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದ ಅವರು ಪಾಠ ದೊಂದಿಗೆ, ಕ್ರೀಡೆ ಕಲೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ, ಭಾಗವಹಿಸಿ, ಇದರಿಂದ ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿ ಗಳಿಗೆ ಕಿವಿ ಮಾತು ನೀಡಿದರು.d0957d3b-b2d3-43be-a155-d91ce5ca8b34

ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮಾತನಾಡಿ’ಇಂದು ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ, ವಿದ್ಯಾರ್ಥಿಗಳ ಚೀಲ, ಕಂಪಾಸ್ ಬಾಕ್ಸ್ ಗಳಲ್ಲಿ ಗಾಂಜಾ ಸೇರಿದಂತೆ, ಯಾವುದು ಇರಬಾರದೋ ಅಂತಹ ವಸ್ತುಗಳ್ನು ಕಾಣುತ್ತಿದ್ದೇವೆ, ಇಂದು ವಿದ್ಯಾರ್ಥಿಗಳಿಗೆ ವಿಫುಲ ವಾದ ಅವಕಾಶಗಳುಇವೆ ಸರಕಾರ ಕೂಡ ಹಲವಾರು ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದೆ ಆದುದರಿಂದ ವಿದ್ಯಾರ್ಥಿಗಳುh ದುಶ್ಚಟ ಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದರು. ಪೋಲ್ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಾದ, ಕುಮಾರಿ ಪ್ರೀತಿ,ಮತ್ತು ಕುಮಾರಿ ಭವಿತಾ ವಿ ಶೆಟ್ಟಿ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ, ಕುಮಾರಿ ಅಂಕಿತ ಅವರುಗಳನ್ನು ಶಾಸಕರು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.21vp muthoor

ಇಲ್ಲಿಗೆ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ಹಿರಿಯ ಶಿಕ್ಷಕ ಸಿಪ್ರಿಯಾನ್ ಡಿ ಸೋಜಾ ರವನ್ನು ಗೌರ್ಸಲಾಯಿತು. ಮುತ್ತೂರು ಪಂ. ಅಧ್ಯಕ್ಷೆ ನಾಗಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು, ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಮುತ್ತೂರು ,ಶಾಲಾ ಹಳೆವಿದ್ಯಾರ್ಥಿ ಡಾ|ಸುರೇಶ ಕುಮಾರ್ , ಕೋವಲಂ, ಕೇರಳ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ವಕೀಲ ಅನ್ಸಾರ್, ಮುತ್ತೂರು ಪಂ. ಉಪಾಧ್ಯಕ್ಷೆ ಪ್ರಭಾವತಿ, ಪಂ ಸದಸ್ಯರಾದ ಪ್ರವೀಣ್ ಆಳ್ವ. ಜೆರಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಎಸ್ ಡಿ ಯಂ ಸಿ ಸದಸ್ಯರುಗಳು, ವಿದ್ಯಾರ್ಥಿ ನಾಯಕರು ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಅನಸೂಯ ಸ್ವಾಗತಿಸಿದರು, ಶಿಕ್ಷಕ ನಿರಂಜನ್ ಕಾರ್ಯಕ್ರಮನಿರ್ವಹಿಸಿದರು, ಬಾಲಕೃಷ್ಣ ವಂದಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.

By suddi9

Leave a Reply

Your email address will not be published. Required fields are marked *