ಬಂಟ್ವಾಳ: ಸಜೀಪ ವಿಶ್ವ ಹಿಂದೂ ಪರಿಷತ್ ,ಭಜರಂಗ ದಳದ ಕಾರ್ಯಕರ್ತರಿಂದ ದತ್ತ ಮಾಲಾಧಾರಣೆ ,ಭಜನಾ ಸಂಕೀರ್ತನೆ, ಕ್ಷೇತ್ರ ಪನೋಲಿಬೈಲಿನಲ್ಲಿ ನಡೆಯಿತು.
ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಕಾರ್ಯದರ್ಶಿ ಲೋಹಿತ್ ಪನೋಳಿಬೈಲ್, ಬಿಜೆಪಿ ನಾಯಕ ಯಶವಂತ ದೇರಾಜೆ,ಭಜರಂಗದಳ ಸಜೀಪ ವಲಯ ಸಹ ಸಂಚಾಲಕ ದೀಪಕ್ ಕೋಟ್ಯಾನ್, ವಲಯ ಸಹ ಸಂಚಾಲಕ ಸಂದೀಪ್ ಬೊಳ್ಳಾಯಿ, ಹರೀಶ್ ಕೊಳಕೆ,ರತನ್ ಬೊಳ್ಳಾಯಿ ರವರುಗಳ ನೇತೃತ್ವದಲ್ಲಿ ದತ್ತಪೀಠಯಾತ್ರೆಯ ಕೈಗೊಳ್ಳಲಾಯಿತು.
ಇದಕ್ಕೂ ಮೊದಲು ಸಜೀಪಮೂಡ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಮಾಲಾಧಾರಿಗಳು ಹಲವು ಮನೆಗಳಲ್ಲಿ ಭಿಕ್ಷಾಟನೆಗೈದರು. ಬಳಿಕ ದತ್ತಪೀಠಕ್ಕೆ ಪಯಣ ಬೆಳೆಸಿದರು.
