ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇವರ ಆಶ್ರಯದಲ್ಲಿ ಎ.ಬಿ.ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇವರಿಂದ ಉಚಿತ ದಂತ ತಪಸಣಾ ಚಿಕಿತ್ಸಾ ಶಿಬಿರವು ಗುರುವಾರ ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಶ್ರೀದೇವಿ .ಪಿ, ದೇವದಾಸ್ ಅರ್ಕುಳ, ಸುಜಾತ, ಹೇಮಾ ಹಾಗೂ ಶಿಕ್ಷಕ ವರ್ಗ,ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ ಪೂಂಜ, ಪ್ರಶಾಂತ್ ಕುಮಾರ್ ತುಂಬೆ,ಮೋಹನ್ ಸಾಲ್ಯಾನ್ ಬೆಂಜನಪದವು, ಸಂತೋಷ್ ಸುಜೀರು ದೈಯಡ್ಕ, ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೀಮಾ ರಾವ್ ಮತ್ತು ಎ.ಬಿ.ಶೆಟ್ಟಿಯ ವೈದ್ಯರು ಹಾಜರಿದ್ದರು. ಸುಮಾರು 190 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
