ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪ್ರವಾಸಿಗರ ಮಿನಿ ಬಸ್ಸೊಂದು ರಸ್ತೆ ಬದಿಗೆ ವಾಲಿದ ಘಟನೆ ಮಾರಿಪಳ್ಳ ಸಮೀಪದ ಪುದು ನಾಣ್ಯ ಎಂಬಲ್ಲಿ ಆದಿತ್ಯವಾರ ಮದ್ಯರಾತ್ರಿ ವೇಳೆ ನಡೆದಿದೆ. ಈ
ಘಟನೆಯಿಂದ ಪ್ರವಾಸಿಗರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ , ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಮೈಸೂರಿನಿಂದ ಮಂಗಳೂರು, ಕೊಲ್ಲೂರು ಸಹಿತ ವಿವಿಧ ಪ್ರವಾಸಿ,ಧಾರ್ಮಿಕ ಕೇಂದ್ರ ಗಳಿಗೆ ಭೇಟಿ ನೀಡಿ ವಾಪಾಸ್ ಮೈಸೂರಿಗೆ ತೆರಳುವ ವೇಳೆ ನಾಣ್ಯದಲ್ಲಿ ಈ ಘಟನೆ ನಡೆದಿದೆ.
ಸಣ್ಣ ಪುಟ್ಟ ಗಾಯಗೊಂಡ ಸಹಿತ ಪ್ರವಾಸಿಗರಿಗೆ ಬದಲಿ ಬಸ್ ವ್ಯವಸ್ಥೆ ಕಲ್ಪಿಸಿ , ಮೈಸೂರಿಗೆ ತಲುಪಿಸುವ ಕಾರ್ಯವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮಾಡಿದ್ದಾರೆಂದು ತಿಳಿದು ಬಂದಿದೆ.
