ಬಂಟ್ವಾಳ: ಪ್ರಕೃತಿಯೊಂದಿಗಿನ ಶಿಕ್ಷಣವು ಮಾತ್ರ ಮಾನವನನ್ನು ಸಹಜತೆಯತ್ತ ಕೊಂಡೊಯ್ಯಬಲ್ಲದು. ಅಂತಹ ಶಿಕ್ಷಣ ಇಲ್ಲಿ ಸಿಗುತ್ತಿದ್ದು, ವ್ಯಕ್ತಿ ನಿರ್ಮಾಣದ ನಿಜವಾದ ಕೇಂದ್ರ ಶ್ರೀರಾಮ ವಿದ್ಯಾಕೇಂದ್ರ ಎಂದು ಬೆಂಗಳೂರು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಹೇಳಿದ್ದಾರೆ. ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿಗೆ ಭೇಟಿ ನೀಡಿದ ಅವರು.ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ನಾನು 3 ಬಾರಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸಿ ವಿಧಾನ ಪರಿಷತ್‌ನ ಸದಸ್ಯನಾಗಿ ಸುಮಾರು ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿದ್ದೇನೆ. ಆದರೆ ಇಲ್ಲಿ ನೀಡಲಾಗುವ ನೆಲ, ಜಲ, ಪರಿಸರದೊಂದಿಗೆ ಸಂಸ್ಕಾರವನ್ನು ಬೆಸೆಯುವ ಸಂಬಂಧವನ್ನು ಎಲ್ಲೂ ನೋಡಿಲ್ಲ ಎಂದು ವೇದಿಕೆಯಲ್ಲಿ ಮೈಸೂರು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ ಶಿವಲಿಂಗಯ್ಯ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.
