ಬಂಟ್ವಾಳ: ಸಮಾಜದಲ್ಲಿ ಧಾರ್ಮಿಕತೆ ಜೊತೆಗೆ ಕ್ರೀಡೆಯ ಮೂಲಕ ಯುವಜನತೆ ಮತ್ತು ಹಿರಿಯರನ್ನು ಒಗ್ಗೂಡಿಸಿ ಮುನ್ನಡೆದು ಆರೋಗ್ಯದಾಯಕ ಸಮಾಜ ನಿರ್ಮಿಸಲು ಸಾಧ್ಯವಿದೆ. ಆ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೂಡಾ ಪಡೆದುಕೊಳ್ಳಬಹುದು ಎಂದು ಬೆಂಗಳೂರು ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿಗಾರ್ ಹೇಳಿದ್ದಾರೆ. ಇಲ್ಲಿನ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನ ಮೈದಾನದಲ್ಲಿ ಜಿಲ್ಲಾ ಪದ್ಮಶಾಲಿ ಮಹಾಸಭಾ ವತಿಯಿಂದ ಭಾನುವಾರ ಏರ್ಪಡಿಸಿದ್ದ ’28ನೇ ಪದ್ಮಶಾಲಿ ಕ್ರೀಡೋತ್ಸವ’ದಲ್ಲಿ ಕ್ರೀಡಾಜ್ಯೋತಿ ಹಸ್ತಾಂತರಿಸಿ ಅವರು ಮಾತನಾಡಿದರು. ಹಾಗು ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಳದ ಗುರಿಕಾರ ಚಂದ್ರಹಾಸ ಶೆಟ್ಟಿಗಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿಪರ ಕೃಷಿಕ ಪಿ.ನೋಣಯ ಶೆಟ್ಟಿಗಾರ್ ಕೊಯಿಲ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ವಿಠಲ ಶೆಟ್ಟಿಗಾರ್ ಕಾರ್ಕಳ ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ವಿನುತಾ ಶೆಟ್ಟಿಗಾರ್ ಪರ್ಕಳ, ಕೆ.ಸುರೇಂದ್ರ ಶೆಟ್ಟಿ ಮಂಗಳೂರು, ಲಲಿತಾ ಸತೀಶ ಶೆಟ್ಟಿಗಾರ್, ರಾಘವ ಶೆಟ್ಟಿಗಾರ್ ಸಾಲಿಕೇರಿ, ಧರ್ಮಣ ಶೆಟ್ಟಿಗಾರ್ ಅಡ್ಯಾರು, ನವೀನ್ ಕುಮಾರ್ ಶೆಟ್ಟಿಗಾರ್ ಸಿದ್ಧಕಟ್ಟೆ, ಭವ್ಯ ಪುರುಷೋತ್ತಮ ಶೆಟ್ಟಿಗಾರ್ ಸಿದ್ಧಕಟ್ಟೆ, ಗುರಿಕಾರ ಗಂಗಾಧರ ಶೆಟ್ಟಿಗಾರ್, ಮೊಕ್ತೇಸರರಾದ ಭೋಜ ಶೆಟ್ಟಿಗಾರ್ ಮತ್ತು ವಾಮನ ಶೆಟ್ಟಿಗಾರ್ ಇದ್ದರು. ಇದೇ ವೇಳೆ ಸರ್ಕಾರಿ ಸೌಲಭ್ಯ ಬಗ್ಗೆ ಕೈಪಿಡಿ ಬಿಡುಗಡೆಗೊಳಿಸಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು.
ದೀಪಕ್ ಶೆಟ್ಟಿಗಾರ್ ಸ್ವಾಗತಿಸಿ, ಕ್ರೀಡಾ ಸಂಚಾಲಕ ದತ್ತರಾಜ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತನಾಡಿದರು. ಗೌತಮ್ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಮತ್ತು ನರೇಂದ್ರ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
