ಬಂಟ್ವಾಳ :  ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಘಟಕದ ಸಹಯೋಗದೊಂದಿಗೆ ಶ್ರೀಮದ್ಭಾಗವತ ಪ್ರವಚನ ಸಪ್ತಾಹ ಜ್ಞಾನಯಜ್ಞ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಳ ಬಂಟ್ವಾಳದ ಮಾಂಗಲ್ಯ ಮಂಟಪದಲ್ಲಿ ಜ.10 ರಂದು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಪ್ರಭಾಕರ ಸೋಮಯಾಜಿಯವರು ಉದ್ಘಾಟಿಸಿದರು.

PRAVACHANA SAPTHAHA
ಇದೇ ಸಂದರ್ಭದಲ್ಲಿ ಶ್ರೀ ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಖ್ಯ ಅತಿಥಿಗಳಾಗಿ ಎ.ಕೃಷ್ಣ ಶರ್ಮ ಮಾತನಾಡಿದರು. ಧಾರ್ಮಿಕ ಚಿಂತಕರಾದ ಕೈಯೂರು ನಾರಾಯಣ ಭಟ್ ಪ್ರವಚನವನ್ನು ನೀಡಲಿದ್ದಾರೆ.
ವೇದಿಕೆಯಲ್ಲಿ ವಸಂತ ರಾವ್, ರಾಜಾರಾಮ ಐತಾಳ್, ಶಂಕರ ನಾರಾಯಣ ಐತಾಳ್, ವಸಂತ ಸೊಮಯಾಜಿ, ಶ್ರೀದೇವಿ ಕೈಯೂರು ಉಪಸ್ಥಿತರಿದ್ದರು. ಜಗದೀಶ ಹೊಳ್ಳ ಸ್ವಾಗತಿಸಿ, ವಿ.ಸು.ಭಟ್ ಧನ್ಯವಾದ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *