ಬಂಟ್ವಾಳ:   ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಶೇರಾ ಎಂಬಲ್ಲಿರುವ  ಗೇರುಬೀಜ ಕಾರ್ಖಾನೆಯೊಂದಕ್ಕೆ  ಧರ್ಮಸ್ಥಳ ಗ್ರಾಮೀಣಾಭಿವ್ರಿದ್ಧಿ ಯೋಜನೆ ಕೈಕೆಳಗೆ ಕಾರ್ಯನಿರ್ವಹಿಸುತ್ತಿರುವ “ರುಡ್ಸೆಟ್ “ಸಂಸ್ಥೆಯ ತಂಡ ಭೇಟಿ ನೀಡಿತು.

IMG-20200115-WA0023ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರಾದ ಜೇಮ್ಸ್ ಅಬ್ರಹಾಂ , ನಿರ್ದೇಶಕರಾದ ವಿನಯ್ ಕುಮಾರ್ ನೇತೃತ್ವದಲ್ಲಿ   ಉಜಿರೆ ಎಸ್. ಡಿ . ಯಂ. ಇಂಜಿನಿಯರಿಂಗ್ ಕಾಲೇಜಿನ  ಉಪನ್ಯಾಸಕರ ತಂಡ ಕಾರ್ಖಾನೆಗೆ ಭೇಟಿ ನೀಡಿ ಗೇರು ಬೀಜ ಉದ್ಯಮ, ಗೇರುಬೀಜ ಸಂಸ್ಕರಣೆ, ಮಾರುಕಟ್ಟೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.   ಗೇರುಬೀಜ ಸಂಸ್ಥೆಯ ಮಾರ್ಗದರ್ಶಕರು, ಹಿರಿಯ ಸಲಹೆಗಾರರಾದ  ಜೆ. ಕೆ.ನಾಯರ್  ರವರು  ತಂಡಕ್ಕೆ ಎಲ್ಲಾ ಮಾಹಿತಿಗಳನ್ನು ನೀಡಿದರು. ಸಂಸ್ಥೆಯ ಮಾಲಕರಾದ ಗಂಗಾಧರ ಶೇರಾ, ಮಲ್ಲಿಕಾ ಗಂಗಾಧರ್, ನೂತನ್, ಆಡಳಿತಾಧಿಕಾರಿ ಶೇಷಪ್ಪ ಮಾಸ್ಟರ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *