ಬಂಟ್ವಾಳ: ನಾವೂರದಲ್ಲಿ ನಡೆದಿರುವುದು ಕರ್ಮಕಲಶ,ಕರ್ಮಕಲಶದ ಮೂಲಕ ನಾವೂರೇಶ್ವರ ದೇವಸ್ಥಾನದ ಲ್ಲಿ ಬ್ರಹ್ಮಕಲಶೋತ್ಸವ ನಡೆದಿದೆ ಎಂಬುದಕ್ಕೆ ಇಲ್ಲಿನ ವ್ಯವಸ್ಥೆ ಗಳೇ ಸಾಕ್ಷಿಯಾಗಿದೆ ಎಂದು ನಡುಬೊಟ್ಟು ಉದ್ಭವ ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರವಿ ಎನ್.ಅವರು ಹೇಳಿದರು.ಅವರು ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣು ಮೂರ್ತಿ ದೇವಸ್ಥಾನ ದ ನವೀಕರಣ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದರು.ಒಡಲಿನ ಲ್ಲಿ ನಾವೂರೇಶ್ವರ ಬಗ್ಗೆ ವಿಶ್ವಾಸ ವಿಟ್ಟ ಪ್ರತಿಫಲವಾಗಿ, ನಿಷ್ಠೆ, ಶ್ರದ್ಧೆ, ಭಕ್ತಿಯಿಂದ ಇಷ್ಟು ವೈಭವದ ಬ್ರಹ್ಮಕಲಶೋತ್ಸವ ನಡೆದಿದೆ ಎಂಬುದು ಗೋಚರಿಸುತ್ತಿದೆ.ಸೂನ್ಯತೆಯಲ್ಲಿ ಮಾನ್ಯ ತೆ ಇದೆ ಎಂಬುದೇ ದೇವರು. ಇದರ ಮಹತ್ವ ಅನುಸರಿಸಿದಾಗ ಮನುಷ್ಯ ಯಶಸ್ಸು ಕಾಣಲು ಸಾಧ್ಯವಿದೆ.
ಪಂಚೇಂದ್ರಿಯಗಳು ಮನುಷ್ಯನ ಜೀವನಕ್ಕೆ ಹೇಗೆ ಮುಖ್ಯವಾಗಿ ಇದೆ ಹಾಗೆಯೇ ದೇವಸ್ಥಾನ ಗಳು ಊರಿಗೆ ಅಷ್ಟೇಮುಖ್ಯವಾಗಿದೆ.ಈ ಬ್ರಹ್ಮಕಲಶೋತ್ಸವದ ಮೂಲಕವಠಾರದ ಎಲ್ಲಾ ಗ್ರಾಮಗಳು ಬೆಳಗಲಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷ ತೆ ವಹಸಿ ಮಾತನಾಡಿದರು.
ಪಂಚೇಂದ್ರಿಯಗಳು ಮನುಷ್ಯನ ಜೀವನಕ್ಕೆ ಹೇಗೆ ಮುಖ್ಯವಾಗಿ ಇದೆ ಹಾಗೆಯೇ ದೇವಸ್ಥಾನ ಗಳು ಊರಿಗೆ ಅಷ್ಟೇಮುಖ್ಯವಾಗಿದೆ.ಈ ಬ್ರಹ್ಮಕಲಶೋತ್ಸವದ ಮೂಲಕವಠಾರದ ಎಲ್ಲಾ ಗ್ರಾಮಗಳು ಬೆಳಗಲಿ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷ ತೆ ವಹಸಿ ಮಾತನಾಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ ಹಿಂದೂ ಧರ್ಮ ಉಳಿಯಬೇಕಾದರೆ ಜಾತಿ, ಧರ್ಮದ ಗೋಡೆಯಿಂದ ಹೊರಬರುವ ಮನಸ್ಸು ಮಾಡಬೇಕು ಎಂದರು. ರಾಜಕೀಯ, ಧರ್ಮ , ಮತ, ಭಾಷೆ, ಜಾತಿ ಮನುಷ್ಯ ನಿಗೆ ಬದುಕಲು ಅಡ್ಡಿಯಾಗುತ್ತಿದೆ, ಈ ಎಲ್ಲವನ್ನು ಮೀರಿ ಬದುಕಿದವನು ವಿಶ್ವ ಮಾನವನಾಗುತ್ತಾನೆ.
ಉತ್ತಮ ವ್ಯಕ್ತಿಯಾಗಿ ಬದುಕುವ ಆಯ್ಕೆ ಯ ಅವಕಾಶ ಮನುಷ್ಯನ ಕೈಯಲ್ಲಿದೆ. ಭಾರತ ಮಾತೆಗೆ ಬ್ರಹ್ಮಕಲಶೋತ್ಸವ ನಡೆದರೆ ಮಾತ್ರ ದೇವಸ್ಥಾನ ಗಳಿಗೆ ನಡೆಯವ ಬ್ರಹ್ಮಕಲಶೋತ್ಸವ ಸಾರ್ಥಕ ವಾಗುತ್ತದೆ. ದೇಶ ಉಳಿದರೆ ಮಾತ್ರ ನಾವು ಉಳಿಯುತ್ತೇವೆ, ದೇವಸ್ಥಾನ ಗಳು ಉಳಿಯುತ್ತದೆ.ಪರಿಸರದ ಏರುಪೇರು ಗಳ ನಡುವೆ ನಾವು ಬದುಕು ಸಾಗಿಸುತ್ತಿದ್ದೇವೆ.ಯುವ ಸಮುದಾಯದಿಂದ ದೇಶ ಕಟ್ಟುವ ಕೆಲಸ ಆಗಬೇಕು ಎಂದು ಅವರು ಹೇಳಿದರು.ಈ ದೇಶ ಹಿಂದೂಸ್ಥಾನವಾಗಿ ಉಳಿಯಬೇಕಾ ಪಾಕಿಸ್ತಾನ ವಾಗಿ ಉಳಿಯಬೇಕಾ ಎಂದು ಜನರು ಯೋಚನೆ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ನವಭಾರತ ನಿರ್ಮಾಣಕ್ಕಾಗಿ ನಾನು ಪ್ರಾಣ ತ್ಯಾಗ ಮಾಡಲು ತಯಾರಿದ್ದೇನೆ ಎಂದು ಅವರು ಹೇಳಿದರು. ದೇವರಿಗೆ ಧನಾತ್ಮಕ ಶಕ್ತಿ ನೀಡುವ ಉದ್ದೇಶದಿಂದ ಬ್ರಹ್ಮಕಲಶೋತ್ಸವ ನಡೆಯುತ್ತಿದೆ.ದುಡಿದು ತಿನ್ನುವ ಮನೆಯಲ್ಲಿ ಲಕ್ಮೀ ನೆಲೆಯಾಗುತ್ತಾಳೆ, ಕಾಯಕವೇ ಕೈಲಾಸ ಎಂದು ನಂಬಿದವರು ಉತ್ತಮವಾಗಿ ಜೀವನ ಮಾಡುತ್ತಾರೆ.ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ನಿರ್ದೇಶಕ ಸತೀಶ್ ಶೆಟ್ಟಿ ಅವರು
ಊರಿನ ದೈವದೇವರ ಆರಾಧನೆ, ಗುರುಹಿರಿಯರಿಗೆ ಗೌರವ ಸಂಸ್ಕೃತಿಯ ಜೀವನಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾಗಿದೆ.
ಮಕ್ಕಳಿಗೆ ಧಾರ್ಮಿಕ ವಿಚಾರಗಳ ಕಾರ್ಯಕ್ರಮ ಗಳಲ್ಲಿ ಭಾಗವಹಸುವ ಬಗ್ಗೆ ತಿಳಿಯಪಡಿಸುವ, ಕೆಲಸಗಳು ಆಗಬೇಕಾಗಿದೆ , ಧರ್ಮ ಉಳಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ತುಳುನಾಡಿನಲ್ಲಿರುವ ಆಚಾರ ವಿಚಾರಗಳು ಅತ್ಯಂತ ಪವಿತ್ರವಾದುದು . ನಂಬಿಕೆಯ ಶಕ್ತಿಯಿಂದ ಇಂತಹ ದೇವಸ್ಥಾನ ಗಳ ನಿರ್ಮಾಣ ಸಾಧ್ಯವಾಗಿದೆ ಎಂದು ಅವರು ಹೇಳಿದರು.ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ಈ ದೇಶದ ಸಂಸ್ಕೃತಿಯನ್ನು ಉಳಿಸುವ ಕೆಲಸಗಳು ದೇವಸ್ಥಾನದ ಮೂಲಕ ಅಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ಕೇಂದ್ರ ಮಂಡಳಿಯ ಹಿಂದೂ ಯುವ ಸೇನೆಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ , ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್ , ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನ ಜಿ.ಕೆ.ಭಟ್, ಉದ್ಯಮಿ ಗಳಾದ ಸಂಜೀವ ಪೂಜಾರಿ, ಜಯಪ್ರಕಾಶ್ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಮುರಳಿಭಟ್ ಹಳೇಗೇಟು , ಕೇಶವ ಎಕ್ಕೂರು ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯನಾಂದ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಸದಸ್ಯ ರಾದ ಮನ್ಮಥ್ ರಾಜ್ ಜೈನ್ ಸ್ವಾಗತಿಸಿ, ಯುವ ನ್ಯಾಯವಾದಿ ನಾಗೇಶ್ ಮುಂಡಶಾಲೆ ವಂದಿಸಿದರು.ರಂಗನಟ ದಿನೇಶ್ ಸಾಲ್ಯಾನ್ ಕನಪಾದೆ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮ ಆರಂಭದ ಮೊದಲು ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಸಭಾ ಕಾರ್ಯಕ್ರಮ ದ ಬಳಿಕ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ” ಸಂಗೀತ ಗಾನ ವೈಭವ” ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.
A
|
ReplyForward
|