ಬಂಟ್ವಾಳ : ಪೌರತ್ವ ತಿದ್ದ್ದುಪಡಿ ಕಾಯ್ದೆ (ಅಂಂ) ಕರಡು ಪ್ರತಿ ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗಿ ಕಾನೂನು ಆಗಿ ಅನುಮೋದನೆಗೊಂಡಿರುತ್ತದೆ. ಸದ್ರಿ ಕಾಯ್ದೆಯು ಸಂವಿಧಾನಾತ್ಮಕ ಮಾನ್ಯತೆ ಪಡೆದಿದ್ದು, ಕೇಂದ್ರ ಸರಕಾರ ಜಾರಿ ಮಾಡಿರುವ ಕಾನೂನನ್ನು ಎಲ್ಲಾ ರಾಜ್ಯಗಳು ಪಾಲನೆ ಮಾಡಬೇಕಾಗುತ್ತದೆ. ಹೀಗಿರುತ್ತಾ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆಳೆಯಲು ಮತ್ತು ಅವರನ್ನು ಶಾಶ್ವತ ಮತಬ್ಯಾಂಕ್‍ಗೊಳಿಸುವ ಏಕೈಕ ಉದ್ದೇಶದಿಂದ ಬೀದಿಗಿಳಿದು ಅಮಾಯಕ ಮುಸ್ಲಿಂರನ್ನು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದನ್ನು ರೋನಾಲ್ಡ್ ಡಿಸೋಜ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರು ಖಂಡಿಸಿರುತ್ತಾರೆ. ಸದ್ರಿ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಪೌರತ್ವ ನೀಡುವ ಕಾನೂನಿ ಆಗಿದ್ದು, ಯಾವ ಭಾರತೀಯನ ಪೌರತ್ವ ಕಸಿಯುವ ಕಾಯ್ದೆಯಾಗಿರುವುದಿಲ್ಲ.

caa-jpg_710x400xt

ಇದನ್ನು ಮೂಲಕ ಜಾರಿಗೆ ತರಲು ಕಾಂಗ್ರೆಸ್ ಸರಕಾರವೇ ನಿರ್ಧರಿಸಿದ್ದು, ಈಗ ರಾಜಕೀಯ ಉದ್ದೇಶಕ್ಕೋಸ್ಕರ ಪ್ರತಿಭಟನೆ ನಡೆಸುತ್ತಿದೆ. ಸರಕಾರದ ಯಾವುದೇ ಕಾನೂನು ಒಂದು ಸಮುದಾಯವು ವಿರೋಧ ಮಾಡುತ್ತದೆ ಎಂದು ಪಾಲಿಸಿದೆ ನಿಲ್ಲಿಸಲು ಸಾಧ್ಯವಿಲ್ಲ. ಸದ್ರಿ ಕಾಯ್ದೆಯ ಬಗ್ಗೆ ಈಗಾಗಲೇ ಹಲವಾರು ಸಂಘಟನೆಗಳು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದು, ಸದ್ರಿ ಕಾಯ್ದೆಯು ಸಂವಿಧಾನಕ್ಕೆ ವಿರೋಧವಿದ್ದರೆ ಅದರಲ್ಲಿ ಸುಪ್ರಿಂ ಕೋರ್ಟ್ ಹಸ್ತಕ್ಷೇಪ ಮಾಡಿ ತಡೆಹಿಡಿಯಬಹುದಾಗಿದೆ. ಆದರೆ ಒಂದು ಸಮುದಾಯ ವಿರೋಧ ಮಾಡುತ್ತದೆ ಎಂದು ತಡೆಹಿಡಿಯಲು ಬರುವುದಿಲ್ಲ. ಪೌರತ್ವ ತಿದ್ದಪಡಿ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮಾಡಿರುವ ಕಾಯ್ದೆಯಾಗಿದ್ದು, ಸಂವಿಧಾನದ ಆಶಯದ ಪ್ರಕಾರ ದುರ್ಬಲರಿಗೆ ರಕ್ಷಿಸುವ ಉದ್ದೇಶ ಹೊಂದಿದ್ದು, ಎಲ್ಲಾ ಸಮುದಾಯದವರು ಇದನ್ನು ಬೆಂಬಲಿಸಬೇಕು ಎಂದು ವಿನಂತಿಸುವುದಾಗಿದೆ.

By suddi9

Leave a Reply

Your email address will not be published. Required fields are marked *