ಬಂಟ್ವಾಳ: ಸಮಾಜದ ಅಭಿವೃದಿಯ ಜೊತೆ ಜೊತೆಯಲ್ಲಿ ವ್ಯಕ್ತಿ ಸಾಧನೆ ಮಾಡಿದಾಗ ಸಿಗುವ ಪ್ರಶಸ್ತಿಗಳು ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ. ವ್ಯಕ್ತಿಯ ಸಾಧನೆಗೆ ಆತನ ವ್ಯಕ್ತಿತ್ವ ಕೂಡಾ ಮಾನದಂಡವಾಗುತ್ತದೆ. ಕೋಪ, ಆಹಂಕಾರ, ದ್ವೇಷ, ಅಸೂಯೆಯನ್ನು ಬಿಟ್ಟು ಮುನ್ನಡೆದಾಗ ದೇಶ ಗುರುತಿಸುವಂತಹ ಸ್ಥಾನಕ್ಕೆ ತಲುಪುತ್ತೇವೆ, ಅಂತಹ ಒರ್ವರಲ್ಲಿ ರಮೇಶ್ ನಾಯಕ್ ಒರ್ವರು ಎಂದು ನಿವೃತ್ತ ಶಾಲಾ ಪರಿವೀಕ್ಷಣಾಧಿಕಾರಿ ಕೆ.ನಾರಾಯಣ ನಾಯಕ್ ಹೇಳಿದರು.

ಅವರು ಶ್ರೀ ಮಹಾಗಣಪತಿ ಸೇವಾ ವೃಂದ,ಕಪರ್ೆ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಪರ್ೆ ಒಕ್ಕೂಟದ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಕೆ.ರಮೇಶ್ ನಾಯಕ್ ರಾಯಿ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧನೆ ಮಾಡಿದ ವ್ಯಕ್ತಿಯ ಜೊತೆಗೆ ಅದರ ಹಿಂದಿನ ಶಕ್ತಿಯನ್ನು ಕೂಡಾ ಗೌರವಿಸುವಂತಾಗಬೇಕು. ಶಿಕ್ಷಕ ವೃತ್ತಿ ಎನ್ನುವುದು ಶ್ರೇಷ್ಟವಾದುದು ಹಾಗಾಗಿ ಶಿಕ್ಷಕರು ಅ ಗೌರವವನ್ನು ಉಳಿಸಿಕೊಳ್ಳಿ ಎಂದು ಶಿಕ್ಷಕರಿಗೆ ಹೇಳಿದರು. ಶಿಕ್ಷಣ ಸಂಸ್ಥೆಯ ಜೊತೆಯಲ್ಲಿ ಇತರ ಸಂಘ ಸಂಸ್ಥೆಗಳಲ್ಲಿ ಕೂಡಾ ರಾಯಿ ಸಾಧನೆ ಮಾಡಿ ಹೆಸರು ಗಳಿಸಿದವರು ಎಂದರು.
ಎಲ್ಲಾ ಸನ್ಮಾನಕ್ಕಿಂತ ತನ್ನ ಹುಟ್ಟೂರ ಸನ್ಮಾನ , ಗೌರವ ಹೆಚ್ಚು ಪವಿತ್ರವಾದುದು ಮತ್ತು ಶ್ರೇಷ್ಟವಾದುದು ಎಂದು ಹುಟ್ಟೂರ ಸನ್ಮಾನ ಸ್ವೀಕರಿಸಿದ ರಮೇಶ್ ನಾಯಕ್ ರಾಯಿ ಹೇಳಿದರು.
ವೇದಿಕೆಯಲ್ಲಿಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೇಲ್ವಿಚಾರಕ ವಿನಾಯಕ ಗುಣಗ, ಸಂಗಬೆಟ್ಟು ಗ್ರಾ.ಪಂ.ಸದಸ್ಯ ದೇವಪ್ಪ ಕಕರ್ೇರ, ತಾ.ಪಂ.ಸದಸ್ಯೆ ರೇವತಿ ಆರ್ ಪೂಜಾರಿ, ಸಿದ್ದಕಟ್ಟೆ ಕಾಲೇಜಿನ ಉಪನ್ಯಾಸಕ ಶೀನಪ್ಪ ಎನ್, ನಿವೃತ್ತ ಆಹಾರ ನಿರೀಕ್ಷಕ ಭೋಜ ಕೆ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಆಡಳಿತ ಮೋಕ್ತೇಸರ ಡಾ|ರಾಮರಾಯ ಪ್ರಭು, ಕಪರ್ೆ ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ನಾಯಕ್ ಹಲಾಯಿ, ಲೋಕಯ್ಯ ಪೂಜಾರಿ, ಸಂಜೀವ ಶೆಟ್ಟಿ, ಗೋವಿಂದ ರಾವ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಊರ ಅಭಿಮಾನಿಗಳಿಂದ ಮತ್ತು ಹಳೇ ವಿದ್ಯಾಥರ್ಿಗಳಿಂದ ಹಾರಾರ್ಪಣೆ ನಡೆಯಿತು.
ಶ್ರೀ ಮಹಾಗಣಪತಿ ಸೇವಾ ವೃಂದ,ಕಪರ್ೆ ಇದರ ಸ್ಫಾಪಕಾಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ, ಶೇಖರ ನಾಯ್ಕ ವಂದಿಸಿದರು. ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.