ಬಂಟ್ವಾಳ: ನವರಾತ್ರಿಗೆ ಶಸ್ತ್ರ -ಶಾಸ್ತ್ರ ಆರಾಧನೆ: ಸಂಸದ ನಳಿನ್ ಜಗತ್ತಿನಲ್ಲಿ ವಸುದೈವ ಕುಟುಂಬ ಮನೋಭಾವ ಹೊಂದಿರುವ ಭಾರತೀಯರು ನವರಾತ್ರಿ ಉತ್ಸವ ಸಂದರ್ಭದಲ್ಲಿ ಶಸ್ತ್ರ ಮತ್ತು ಶಾಸ್ತ್ರ ಆರಾದನೆ ಮಾಡುವ ಮೂಲಕ ಶಿಷ್ಟರ ರಕ್ಷಣೆ ಮತ್ತು ದುಷ್ಟರನ್ನು ಶಿಕ್ಷಿಸುವ ನವದುರ್ಗೆಯನ್ನು ಪೂಜಿಸುತ್ತಾರೆ. ಆ ಮೂಲಕ ಮೂಢನಂಬಿಕೆಗೆ ಬದಲಾಗಿ ಮೂಲ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
4btl-1
ತಾಲ್ಲೂಕಿನ ಕೊಯಿಲದಲ್ಲಿ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೊತ್ಥಾನ ವೇದಿಕೆ ಮತ್ತು ಶ್ರೀ ಶಾರದಉತ್ಸವ ಸಮಿತಿ ವತಿಯಿಂದ ಶನಿವಾರ ನಡೆದ 12ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಮಾತನಾಡಿ, ಪ್ರಕೃತಿಯಲ್ಲಿ ದೇವರನ್ನು ಕಾಣುವ ಹಿಂದೂ ಧರ್ಮವನ್ನು ಒಡೆಯಲು ರಾಜಕೀಯ ಪ್ರೇರಿತ ಶಕ್ತಿಗಳು ಯತ್ನಿಸುತ್ತಿದೆ. ಇದಕ್ಕಾಗಿ ಹಿಂದೂ ಸಮಾಜ ಒಗ್ಗೂಡಿ ದೇಶ ಮತ್ತು ಧರ್ಮ ಸಂರಕ್ಷಣೆ ಮಾಡಬೇಕು ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಅನುವಂಶಿಕ ಮೊಕ್ತೇಸರ ವೆಂಕಟರಮಣ ಅಸ್ರಣ್ಣ ಆಶೀರ್ವಚನ ನೀಡಿದರು.
ತುಮಕೂರು ಯುವಭಾರತ್ ಸ್ವಾಭಿಮಾನ್ ಟ್ರಸ್ಟ್ನ ನಿಖೇತ್ರಾಜ್ ಮಾತನಾಡಿ, ವಿದೇಶೀಯರಿಗೆ ‘ಭಗವದ್ಗೀತೆ’ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಮತ್ತೆ ಜಗತ್ತಿಗೆ ಗುರುವಾಗಿ ಬೆಳಯಲಿದೆ ಎಂದು ಹೇಳಿದರು.
ವಿಟ್ಲ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಉದ್ಯಮಿ ಗೋಪಾಲಕೃಷ್ಣ ಮೇಲಾಂಟ, ಪಿ.ರಾಕೇಶ ಮಲ್ಲಿ, ಕೆ.ಸತೀಶ ಭಂಡಾರಿ, ಕೆ.ದಿನೇಶ್ ಕುಮಾರ್, ವಕೀಲ ರಾಜಾರಾಮ್ ನಾಯಕ್, ಲಯನ್ಸ್ನ ಜಿ.ಆರ್. ಶೆಟ್ಟಿ, ಸುರೇಶ ರೈ, ಎಂ.ದೇವಪ್ಪ ಶೆಟ್ಟಿ ಮಾವಂತೂರು, ವಕೀಲ ರಾಜಾರಾಮ್ ನಾಯಕ್, ವಿಜಯ ಬ್ಯಾಂಕ್ ಶಾಖಾಧಿಕಾರಿ ಬೇಬಿ ಕುಂದರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸಮಿತಿ ಗೌರವಾಧ್ಯಕ್ಷರಾದ ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮತ್ತಿತರರು ಶುಭ ಹಾರೈಸಿದರು.
ಜಿ.ಪಂ. ಸದಸ್ಯೆ ನಳಿನಿ ಬಿ. ಶೆಟ್ಟಿ, ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು ಮತ್ತಿತರರು ಇದ್ದರು.
ಇದೇ ವೇಳೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ, ಯಕ್ಷಗಾನ ಹಿಮ್ಮೇಳ ಕಲಾವಿದ ಶಿರಂಕಲ್ಲು ರಾಮಕೃಷ್ಣ ಭಟ್, ಯಕ್ಷಗಾನ ಯುವ ಪ್ರತಿಭೆ ಪ್ರೇಮ್ರಾಜ್ ಕೊಯಿಲ ಇವರನ್ನು ಸಮ್ಮಾನಿಸಲಾಯಿತು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ  ಡೊಂಬಯ ಬಿ.ಅರಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ  ದಿನೇಶ್ ಸುವರ್ಣ ಮತ್ತು ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *