ಕೈಕಂಬ:ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ಸಮಸ್ತ ದೇವಾಡಿಗ ಸಮಾಜದ ವತಿಯಿಂದ ನೂತನ ಷಷ್ಠಿರಥ ಸಮರ್ಪಣೆಯು ಮಾ.11 ಬುಧವಾರ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಇವರ ನೇತೃತ್ವದಲ್ಲಿ ಕ್ಷೇತ್ರದ ಪವಿತ್ರಪಾಣಿ ಪೊಳಲಿ ಶ್ರೀ ಮಾಧವ ಭಟ್, ಮತ್ತು ಕ್ಷೇತ್ರದ ಅರ್ಚಕರಾದ ರಾಮ್ ಭಟ್, ಪರಮೇಶ್ವರ ಭಟ್,ವಿಷ್ಣುಮೂರ್ತಿ ಭಟ್, ಮಾಧವ ಮಯ್ಯ ಇವರ ಮಾರ್ಗದರ್ಶನದಲ್ಲಿ ಹೊರೆಕಾಣಿಕೆ, ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನೂತನ ಷಷ್ಠಿರಥ ಸಮರ್ಪಣೆ ಹಾಗೂ ರಥೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಹಿಂದು ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ಆಡಳಿತ ಮೋಕ್ತೇಸರ ಮಂಜಯ್ಯ ಶೆಟ್ಟಿ, ಮೋಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್,ಕಾರ್ಯನಿರ್ವಾಣಾಧಿಕಾರಿ ಪ್ರವೀಣ್, ಪೊಳಲಿ ಗಿರಿಪ್ರಕಾಶ್ ತಂತ್ರಿ ಹಿಂದೂ ಧಾರ್ಮಿಕ ಧರ್ಮದಾಯ ಧತ್ತಿ ಇಲಾಖೆ,ಸ್ವಾಮೀ ವಿವೇಕ ಚೈತನ್ಯಾನಂದ ಸ್ವಾಮೀಜಿ,ಅಧ್ಯಕ್ಷರು ರಾಮ್ದಾಸ್ ಬಂಟ್ವಾಳ, ಗೌರವಾಧ್ಯಕ್ಷರು ಗೋಪಾಲ ಎಂ.ಮೊಯಿಲಿ,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ. ತುಂಬೆ, ಕೋಶಾಧಿಕಾರಿ ನಾಗೇಶ್ ದೇವಾಡಿಗ ಪೊಳಲಿ, ಗೌರವ ಸಲಹೆಗಾರರು, ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿರಥ ಸಮರ್ಪಣಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.