ಬಂಟ್ವಾಳ: ಪಿಕಪ್  ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಟ ಮಾಡುವುದನ್ನು  ತಾಲೂಕಿನ ಶಂಭೂರು ಎಂಬಲ್ಲಿ ಮಂಗಳವಾರ ಪತ್ತೆ ಹಚ್ಚಿರುವ  ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ನಾಲ್ಕು ಜಾನುವಾರುಗಳು ರಕ್ಷಿಸಿ ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

IMG-20200317-WA0086
ಪಿಕಪ್  ಚಾಲಕ ಅಡ್ಯಾರಪದವು ನಿವಾಸಿ ಮಹಮ್ಮದ್ ಸಾದಿಕ್, ಶಂಭೂರು ನಿವಾಸಿ ಅಂತೋನಿ ವೇಗಸ್, ಮಂಗಳೂರಿನ ಕುಡುಪು ನಿವಾಸಿ ಅನಿಲ್ ನೊರೊನ್ಹಾ ಬಂಧಿತ ಆರೋಪಿಗಳು. ಶಂಭೂರಿನಲ್ಲಿ ವಾಹನ ತಪಾಸಣೆಯ ವೇಳೆ ನಿರತರಾಗಿದ್ದ ಗ್ರಾಮಾಂತರ ಠಾಣೆಯ ಪೊಲೀಸರು ಅನುಮಾನಸ್ಪದವಾಗಿ ಬರುತ್ತಿದ್ದಪಿಕಪ್ ವಾಹನ ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿರುವುದು ಕಂಡು ಬಂತು.

IMG-20200317-WA0085ಆರೋಪಿಗಳು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು ತಕ್ಷಣ ವಾಹನದಲ್ಲಿದ್ದ ಆರೋಪಿಗಳನ್ನು ಬಂಧಿಸಿ ಜಾನುವಾರಗಳನ್ನು ವಶ ಪಡಿಸಲಾಯಿತು. ಪಿಕಪ್ ಸೇರಿದಂತೆ ಸೊತ್ತುಗಳ ಮೌಲ್ಯ ಸುಮಾರು ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.ಗ್ರಾಮಾಂತರ ಠಾಣಾ ಎಸ್.ಐ.ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಅವರ  ಸಿಬ್ಬಂದಿ ಗಳು ಈ ಪತ್ತೆ ಕಾರ್ಯ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *