ಬಂಟ್ವಾಳ: ಬೆಂಕಿ ಅಪಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹರಿಣಾಕ್ಷಿ ಎಂಬವರ ತುರ್ತು ಚಿಕಿತ್ಸೆಗಾಗಿ ಯುವಶಕ್ತಿ ಕಡೇಶಿವಾಲಯದ ನೇತೃತ್ವದಲ್ಲಿ ಊರಪರವೂರ ದಾನಿಗಳ ನೆರವಿನಿಂದ ಸಂಗ್ರಹಿಸಲ್ಪಟ್ಟ 1,65,000 ರೂ. ವನ್ನು ಬುಧವಾರ ಶ್ರೀರಾಮ ಭಜನಾ ಮಂದಿರದಲ್ಲಿ ಗಾಯಾಳುವಿನ ಪತಿ ದಿನೇಶ್ ರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವಶಕ್ತಿ ಕಡೇಶಿವಾಲಯದ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.