ಕೈಕಂಬ: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಎಂಬಲ್ಲಿ ಬೈಕ್ ಹಾಗೂ ಪಿಕ್ಅಪ್ ನಡುವೆ ಉಂಟಾದ ಪರಸ್ಪರ ಅಪಘಾತಕ್ಕೆ ಬೈಕ್ ಸವಾರೋರ್ವರು ಗಂಭೀರವಾಗಿ ಗಾಯಗೊಂಡರೆ ಸಹಸವಾರ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

IMG-20141006-WA0027

IMG-20141006-WA0028

IMG-20141006-WA0030

IMG-20141006-WA0031

IMG-20141006-WA0033

IMG-20141006-WA0034
ಪಿಕ್ಅಪ್ ಗಂಜಿಮಠದಿಂದ ಕೈಕಂಬದ ಕಡೆಗೆ ತೆರಳುತ್ತಿತ್ತು. ಇದರ ವಿರುದ್ಧ ದಿಕ್ಕಿನಲ್ಲಿ ಬೈಕ್ ಕೂಡಾ ತೆರಳುತ್ತಿದ್ದು ಸೂರಲ್ಪಾಡಿಯ ಎಡಬದಿಯ ರಸ್ತೆಗೆ ತೆರಳುವ ವೇಳೆ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಬಂದ ಪಿಕ್ಅಪ್ ಸವಾರ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಕ್ರದಡಿಗೆ ಸಿಲುಕಿತ್ತು. ಸವಾರರಿಬ್ಬರು ಬೈಕ್ನಿಂದ ಎಸೆಯಲ್ಪಟ್ಟು ಒಬ್ಬಾತ ಗಂಭೀರವಾಗಿ ಗಾಯಗೊಂಡರೆ ಮತ್ತೊಬ್ಬರು ಸಣ್ಣಪುಟ್ಟಗಾಯಗಳೊಂದಿಗೆ ಪಾರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ಸೂರಲ್ಪಾಡಿಯ ವ್ಯಕ್ತಿಯೋರ್ವರು ತನ್ನದೇ ವಾಹನದಲ್ಲಿ ಸಾಗಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಾಯಾಳುಗಳು ಸೂರಲ್ಪಾಡಿಯಲ್ಲಿ ಮೇಸ್ತ್ರಿ ಕೆಸಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ. ಬಜ್ಪೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

By suddi9

Leave a Reply

Your email address will not be published. Required fields are marked *