ಕೈಕಂಬ: ಊರಿಗೆ ಕಸಹಾಕುವುದನ್ನು ವಿರೋಧಿಸಿದಕ್ಕೆ ದಾಂಧಲೆ ನಡೆಸಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಕುಪ್ಪೆಪದವು, ಸೂರಲ್ಪಾಡಿ ಹಾಗೂ ಪಾಟ್ನಾದ ಹಲವು ಆರೋಪಿಗಳು ಊರು ಬಿಟ್ಟಿದ್ದಾರೆಂಬ ಸುದ್ದಿ ಇದೆ.  ಗಂಜಿಮಠ ಮೊಗರು ಗ್ರಾಮದ ಅರ್ಬಿ  ಎಂಬಲ್ಲಿ ಭಾನುವಾರ ಸಂಜೆ ಏಳರ ಸುಮಾರಿಗೆ  ಮೊಗರು ಗ್ರಾಮದ ಸದಾಶಿವ ಕಿಲಾಡಿ, ಅವರ ತಾಯಿ ದೇಜಮ್ಮ ಹಾಗೂ ಸಂದೀಪ್ ಎಂಬವರಿಗೆ ಆರೋಪಿಗಲು ಗಂಭಿರ ಹಲ್ಲೆ ನಡೆಸಿಪರಾರಿಯಾಗಿದ್ದರು.

Knife crime

ಊರಲ್ಲಿ ಕಸಹಾಕುವುದನ್ನು ತಡೆಯುವ ಉದ್ದೇಶದಿಂದ ಕಾದುಕುಳಿತಿದ್ದ ಸ್ಥಳಿಯರ ಮೇಲೆ ಲಾರಿಯಲ್ಲಿ ಜನಕಟ್ಟಿಕೊಂಡು ಬಂದು ಆರೋಪಿಗಳು ಪುಂಡಾಟಿಕೆ ಮೆರೆದಿದ್ದರು. ಇದೀಗ ಪೊಲೀಸರು ಕೇಸ್ ಹಾಕುತ್ತಾರೆ ಎಂಬ ಭಯದಿಂದ ಹಲವರು ಊರು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಜ್ಪೆ ಪೊಲೀಸರು ಇಂದೂ ಕೂಡಾ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡುವ ಸಲುವಾಗಿ ಬಿಗಿಪಹರೆ ಹಾಕಿದ್ದಾರೆ.

ಪೊಲೀಸರು ಗಾಯಾಳುಗಳ ಮಾಹಿತಿಯನ್ನು ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *